ಜಿಲ್ಲೆ

ಗಮನ ಸೆಳೆದ ಕೃಷ್ಣ-ರಾಧೆ ವೇಷಧಾರಿಗಳು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಕೆ.ಇ.ಬಿ. ಕಾಲೊನಿಯಲ್ಲಿ ಇರುವ ಶ್ರೀ ಗಣೇಶ್ವರ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಪತಂಜಲಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆ ವೇಷ ಧರಿಸಿದ್ದ ಚಿಣ್ಣರು ಗಮನ ಸೆಳೆದರು.

ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ನೆರೆದವರ ಮನ ಗೆದ್ದರು.

ಟ್ರಸ್ಟ್ ಅಧ್ಯಕ್ಷೆ ಉಷಾ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಬಸವರಾಜ ಮುಗಟಾಪುರೆ ನಂದಗಾಂವ್, ಸಿದ್ಧಾರ್ಥ ಕಾಲೇಜು ಪ್ರಾಚಾರ್ಯ ಗೋಪಾಲ್, ಎಎಸ್‍ಐ ಅನಿತಾ ಪೋಲದಾಸ್, ಮುಖ್ಯಶಿಕ್ಷಕಿ ಸುಪ್ರಿಯಾ ಕುಲಕರ್ಣಿ, ಸಂಘಮಿತ್ರ, ಕಿರಣ, ಆಕಾಶ್ ಮೋರೆ, ವನಿತಾ ಕುಲಕರ್ಣಿ, ಪೂಜಾ ಕೋಳಿ, ಅನಿತಾ ಕಾಂಬಳೆ, ಶ್ರುತಿ ತಲಾರಿ, ಪವಿತ್ರಾ ಸ್ವಾಮಿ, ಶಾರದಾ ದೊಡ್ಡೆ ಇದ್ದರು.