ಜಿಲ್ಲೆ

ಜಾನಸನ್ ಘೋಡೆ ಉಸ್ತುವಾರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬಿಹಾರದ ದರ್ಭಾಂಗ್ ವಿಭಾಗದ ಕಾಂಗ್ರೆಸ್ ವೋಟ್ ಅಧಿಕಾರ ಯಾತ್ರೆಯ ಉಸ್ತುವಾರಿಯಾಗಿ ಜಿಲ್ಲೆಯ ಜಾನಸನ್ ಘೋಡೆ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕರಾಗಿರುವ ಘೋಡೆ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಕಿಸಾನ್ ವಿಭಾಗದ ಸಂಘಟನಾ ಉಸ್ತುವಾರಿ ಅಖಿಲೇಶ್ ಶುಕ್ಲಾ ತಿಳಿಸಿದ್ದಾರೆ. ದರ್ಭಾಂಗ್ ವಿಭಾಗವು ದರ್ಭಾಂಗ್, ಮಧುಬನಿ ಹಾಗೂ ಸಮಸ್ಟಿಪುರ ಜಿಲ್ಲೆಗಳನ್ನು ಒಳಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆ.17 ರಿಂದ ಬಿಹಾರ ರಾಜ್ಯದಾದ್ಯಂತ ವೋಟ್ ಅಧಿಕಾರ ಯಾತ್ರೆ ನಡೆಸಲಿದ್ದಾರೆ.