ಜಿಲ್ಲೆ

ಸಂಗೀತ ಕಾರ್ಯಕ್ರಮ 10ರಂದು

ರೇವಣಸಿದ್ದಪ್ಪ ಪಾಟೀಲ್
ಬೀದರ್: ಪ್ರಖ್ಯಾತ ಬಾಲಿವುಡ್ ನಟ, ಗಾಯಕ ಕಿಶೋರ್ ಕುಮಾರ ಅವರ 96ನೇ ಜನ್ಮ ದಿನದ ನಿಮಿತ್ತ ಬೀದರ್ ಸಂಗೀತ ಕಲಾ ಮಂಡಲದಿಂದ  ಆ.10ರಂದು( ಭಾನುವಾರ) ಸಂಜೆ 5.30ಕ್ಕೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ "ಏಕ್ ಶ್ಯಾಮ್ ಕಿಶೋರ್‌ ಕೆ ನಾಮ್" ಸಂಗೀತ ಸಂಜೆ ಆಯೋಜಿಸಲಾಗಿದೆ.
ಗ್ಲೋಬಲ್ ಸೈನಿಕ ಅಕಾಡಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಉದ್ಘಾಟಿಸುವರು. ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್ ಅಧ್ಯಕ್ಷತೆ ವಹಿಸುವರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿಜಯಕುಮಾರ ಕೋಟೆ, ಹಿರಿಯ ವೈದ್ಯ ಡಾ.ಸುಭಾಷ ಬಶೆಟ್ಟಿ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ನಿವೃತ್ತ ಆರ್ ಟಿಒ ಕೆ.ಟಿ.ವಿಶ್ವನಾಥ, ಬೆಳಗು ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸ್ಥಳೀಯ ಖ್ಯಾತ ಕಲಾವಿದರಾದ ಆಬೀದ್ ಅಲಿ ಖಾನ್, ಮಹೇಶ್ವರಿ ಪಾಂಚಾಳ, ಶಬ್ಬೀರ್ ಖಾನ್, ಡಾ.ವಿ.ವಿ.ನಾಗರಾಜ, ಅಂಜಲಿ ಕಮಲಾಪುರೆ ಅವರು ಗಾನಲಹರಿ ಹರಿಸಲಿದ್ದಾರೆ. ಇಲ್ಲಿನ ಕಲಾವಿದರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಗೀತ ಕಲಾ ಮಂಡಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಗೀತ ಕಲಾ ಮಂಡಲ ಅಧ್ಯಕ್ಷರಾದ ರಾಜೇಂದ್ರಸಿಂಗ್ ಪವಾರ್, ಉಪಾಧ್ಯಕ್ಷ ರಮೇಶ ಗೋಯಲ್, ಕಾರ್ಯದರ್ಶಿ ಎಸ್.ಆರ್.ಸಂಗಮಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.