ಜಿಲ್ಲೆ

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಭಾಲ್ಕಿ ತಾಲ್ಲೂಕಿನ ಮದಕಟ್ಟಿ ಗ್ರಾಮದಲ್ಲಿ ಜನರಿಗೆ ವೈದ್ಯಕೀಯ ಉಪಚಾರ ನೀಡುತ್ತಿರುವ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಜಗದೀಶ್ ಹೊನ್ನಾಳೆ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಆರ್.ಎಂ.ಪಿ.ಗಳಾದ ಅಶೋಕ ಬೆಳಕೇರೆ ಹಾಗೂ ಶಿವಕುಮಾರ ಮೇತ್ರೆ ಎಂಬುವರು ಪರವಾನಗಿ ಇಲ್ಲದೆ ಹಲವು ವರ್ಷಗಳಿಂದ ವಿವಿಧ ಹಳ್ಳಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಎಂ.ಬಿ.ಬಿ.ಎಸ್ ಪೂರೈಸದ ಹಾಗೂ ನುರಿತ ವೈದ್ಯರಲ್ಲದ ಕಾರಣ ರೋಗಿಗಳ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ. ಕೂಡಲೇ ಈ ಇಬ್ಬರು ವೈದ್ಯಕೀಯ ಉಪಚಾರ ನೀಡುವುದನ್ನು ತಡೆ ಹಿಡಿಯಬೇಕು. ದಂಡ ವಿಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.