ಜಿಲ್ಲೆ

ಭಗೀರಥ ಟ್ರೋಫಿ ಕ್ರಿಕೆಟ್ ಪಂದ್ಯ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲ್ಲೂಕಿನ ಯದಲಾಪುರ ಗ್ರಾಮದಲ್ಲಿ 20 ಓವರ್‍ಗಳ ಭಗೀರಥ ಟ್ರೋಫಿ ಏಕ ಕ್ರಿಕೆಟ್ ಪಂದ್ಯ ನಡೆಯಿತು.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೀದರ್‍ನ ಮಹೇಶ್ವರಿ ಕ್ರಿಕೆಟ್ ಕ್ಲಬ್ ತಂಡ 19.4 ಓವರ್‍ಗಳಲ್ಲಿ ಎಲ್ಲ ವಿಕೇಟ್‍ಗಳನ್ನು ಕಳೆದುಕೊಂಡು 98 ರನ್ ಗಳಿಸಿತು.

ನಂತರ ಬೀದರ್‍ನ ರೈಸಿಂಗ್ ಸ್ಟಾರ್ಸ್ ಕ್ರಿಕೆಟ್ ಕ್ಲಬ್ ತಂಡ 14 ಓವರ್‍ಗಳಲ್ಲಿ 101 ರನ್ ಗಳಿಸಿ ವಿಜಯ ಪತಾಕೆ ಹಾರಿಸಿತು.

ವಿಜೇತ ತಂಡಕ್ಕೆ ಮಹೇಶ್ವರಿ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ತಾನಾಜಿ ಸಗರ್ ಟ್ರೋಫಿ ಪ್ರದಾನ ಮಾಡಿದರು.

ಟ್ರಸ್ಟ್ ಉಪಾಧ್ಯಕ್ಷ ಅನಿಲ್ ಉಪ್ಪಾರ್, ಶಾಂತಕುಮಾರ ಮಂಗಲೆ, ಶಿವಕುಮಾರ ಶಹಾಪುರೆ, ರೈಸಿಂಗ್ ಕ್ರಿಕೆಟ್ ಕ್ಲಬ್‍ನ ರಿಯಾಜ್,  ಮಹೇಶ್ವರಿ ಕ್ರಿಕೆಟ್ ಕ್ಲಬ್‍ನ ಮಾರುತಿ ಮತ್ತಿತರರು ಇದ್ದರು.

ಮಹೇಶ್ವರಿ ಎಜುಕೇಶನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಗೀರಥ ಟ್ರೋಫಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು.