ಬೀದರ್: ಇಲ್ಲಿಯ ಗಣೇಶ ಮೈದಾನದಲ್ಲಿ ಇರುವ ಶ್ರೀ ಸಿದ್ಧರಾಮೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಜುಲೈ 28 ರಿಂದ ಆಗಸ್ಟ್ 31 ರ ವರೆಗೆ ಪ್ರತಿ ಸೋಮವಾರ, ಮಂಗಳವಾರ ಹಾಗೂ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಶಲ್ಯ ತಂತ್ರ ವಿಭಾಗದ ವತಿಯಿಂದ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಶಿಬಿರ ಜರುಗಲಿದೆ. ಪೈಲ್ಸ್, ಪಿಸ್ತೂಲ ಮೊದಲಾದ ಗುದ ಸಂಬಂಧಿ ರೋಗಗಳ ತಪಾಸಣೆ ಮಾಡಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಡಾ. ರೂಪೇಶ್ ಎಕಲಾರಕರ್ ತಿಳಿಸಿದ್ದಾರೆ.
ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7676999992 ಅಥವಾ 7057358224ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.