ಬೀದರ್: ಎಲ್ಲರೂ ಮೆಚ್ಚುವಂತಹ ಸುಂದರ ಬದುಕಿನ ಸೂತ್ರ ನೀಡುವವನೇ ನಿಜವಾದ ಗುರು ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಯೋಗ ಗುರು ಯೋಗೇಂದ್ರ ಯದಲಾಪುರೆ ಹೇಳಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಚಿಟ್ಟಾ ರಸ್ತೆಯಲ್ಲಿ ಇರುವ ದತ್ತಗಿರಿ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತ್ಯವನ್ನು ಅರಿತವರು, ಲೌಕಿಕದ ಸೆಳೆತಗಳಿಂದ ಮುಕ್ತರಾದವರು, ಭಕ್ತರ ದುಃಖಗಳನ್ನು ಪರಿಹರಿಸುವವರು ಶ್ರೇಷ್ಠ ಗುರುಗಳೆನಿಸುತ್ತಾರೆ ಎಂದು ತಿಳಿಸಿದರು.
ಗುರು ದೇವರಿಗೆ ಸಮಾನ. ಹೀಗಾಗಿ ಕಣ್ಣಿಗೆ ಕಾಣುವ ಗುರುವಿಗೆ ಶ್ರದ್ಧೆ, ಭಕ್ತಿಯಿಂದ ನಮಿಸಬೇಕು. ಅವರಿಗೆ ಶರಣು ಹೋಗಬೇಕು. ಹಿಂದೆ ಗುರುವಿದ್ದರೆ ಸಾಕು ಮನುಷ್ಯ ಎಂತಹ ಗುರಿಯನ್ನೂ ತಲುಪಬಹುದು ಎಂದು ಹೇಳಿದರು.
ಭಾರತ ಶರಣರು, ಸಂತರು, ಮಹಾ ಪುರುಷರು ಆಗಿ ಹೋದ ಪುಣ್ಯ ಭೂಮಿ. ಈ ದೇಶದ ಇತಿಹಾಸ, ಪರಂಪರೆ, ಸಂಸ್ಕøತಿ ಶ್ರೇಷ್ಠವಾದದ್ದು. ಈ ಭೂಮಿಯಲ್ಲಿ ಜನಿಸಿದ ನಾವು ಧನ್ಯರು ಎಂದರು.
12ನೇ ಶತಮಾನದ ಶರಣರು ಸಮಾಜಕ್ಕೆ ಅನೇಕ ಮೌಲ್ಯಗಳನ್ನು ಕೊಟ್ಟಿದ್ದಾರೆ. ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು. ಜೀವನ ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವುದನ್ನು ಗುರು ಕಲಿಸಿಕೊಡುತ್ತಾರೆ ಎಂದು ಶಿವಮೂರ್ತಿ ಬಟನಾಪುರೆ ಹೇಳಿದರು.
ಅಂಧಕಾರದಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ಕರೆದೊಯ್ಯುವವನೇ ಗುರು ಎಂದು ಚಂದ್ರಕಾಂತ ಪಟ್ನೆ ಬಣ್ಣಿಸಿದರು.
ಯೋಗ ಸಾಧಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯೋಗೇಂದ್ರ ಯದಲಾಪುರೆ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ರಾಮದೇವ ಬಾಬಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಪ್ರಮುಖರಾದ ಡಾ. ವೈಜಿನಾಥ ಬಿರಾದಾರ, ವಿಶ್ವನಾಥ ಮಠಪತಿ, ರಾಘವೇಂದ್ರ ಕುಲಕರ್ಣಿ, ಕೃಷ್ಣರೆಡ್ಡಿ, ಅಶೋಕ ರೆಡ್ಡಿ, ಶಿವಾಜಿ ಭೋಸ್ಲೆ, ಸತ್ಯವಾನ್ ಚಾಂಡೇಶ್ವರ, ಶಿವಶರಣಪ್ಪ ಮೂಲಗೆ, ಗುರಪ್ಪ ಗಿರಮಲ್, ರಮೇಶ ಬಿರಾದಾರ, ಶಿವಶರಣಪ್ಪ ದಾನಾ, ನಾಗರಾಜ ಸ್ವಾಮಿ, ಮಲ್ಲಿಕಾರ್ಜುನ ನೆಲವಾಡ, ವೀರಭದ್ರ ಮಾಳಗೆ, ಶಿವಾನಂದ ದೊಣ್ಣೆ, ಸಂಜೀವ ರೆಡ್ಡಿ, ವಿನೀತ್ ರೆಡ್ಡಿ, ಉಮಾದೇವಿ ಹೂಗಾರ್, ರಾಜೇಶ್ವರಿ ಕಲೀಮ್, ಅನಿತಾ ಮಡಿವಾಳ, ಜಗದೇವಿ ಮಡಿವಾಳ, ಮಹಾನಂದ ಬರದಾಬಾದೆ, ಕಾವೇರಿ, ಶ್ರುತಿ ಅಶೋಕ ಗೋರ್ಟೆ, ಅಶ್ವಿನಿ ಪಾಟೀಲ, ಶಾರದಾ ಮೋದಿ, ನಾಗಮಣಿ ಗೋರ್ಟೆ, ವಿದ್ಯಾವತಿ ಸಜ್ಜನಶೆಟ್ಟಿ, ಪೂಜಾ, ಶಕುಂತಲಾ ಮಡಿವಾಳ, ಪುಷ್ಪಾ ಮಡಿವಾಳ, ಭದ್ರಮ್ಮ, ಗೀತಾ ಪಟ್ನೆ, ನಾಗಮ್ಮ ಗಿರಿಮಲ್ ಹಾಜರಿದ್ದರು.
ನವೀನ್ ಘುಳೆ ಸ್ವಾಗತಿಸಿದರು. ಹುಲೆಪ್ಪ ಬರದಾಬಾದೆ ನಿರೂಪಿಸಿದರು. ಲಲಿತಾ ಎನ್. ಗಾದಗೆ ವಂದಿಸಿದರು.