ಜಿಲ್ಲೆ

ಎಲಿಷ್‍ಗೆ ಪಿಎಚ್‍.ಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಎಲಿಷ್ ಅವರಿಗೆ ಆಂಧ್ರಪ್ರದೇಶದ ಕುಪ್ಪಂನ ಡ್ರಾವಿಡಿಯನ್ ವಿಶ್ವವಿದ್ಯಾಲಯ ಪಿಎಚ್‍.ಡಿ ನೀಡಿದೆ.

ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕ ಡಾ. ಮಹಾಂತೇಶ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ಅವರು ಮಂಡಿಸಿದ ‘ಸೊಲುಷನ್ಸ್ ಆಫ್ ಸಮ್ ಪ್ರಾಬ್ಲಮ್ಸ್ ಆಫ್ ಬೌಂಡರಿ ಲೇಯರ್ ಥೆರಿ ಆ್ಯಂಡ್ ದೇರ್ ಅಪ್ಲಿಕೇಷನ್ಸ್’ ಕುರಿತು ಮಂಡಿಸಿದ ಪ್ರೌಢ ಪ್ರಬಂಧವನ್ನು ಪಿಎಚ್‍ಡಿಗೆ ಮಾನ್ಯ ಮಾಡಿದೆ.

ಎಲಿಷ್ ಅವರಿಗೆ ಪಿಎಚ್‍ಡಿ ದೊರೆತಿದ್ದಕ್ಕೆ ಕಾಲೇಜಿನ ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.