ಬೀದರ್: ಇಲ್ಲಿಯ ಬೆನಕನಳ್ಳಿ ರಸ್ತೆಯಲ್ಲಿ ಇರುವ ದಿಕ್ಷಿತ್ ಲೇಔಟ್‍ನಲ್ಲಿ ಭಾರತದ ರಿಯಲ್ ಎಸ್ಟೇಟ್ ಡೆವಲಪರ್ಸ್‍ಗಳ ಸಂಘಟನೆಗಳ ಒಕ್ಕೂಟದಿಂದ ಗುರುವಾರ 450 ಸಸಿಗಳನ್ನು ನೆಡಲಾಯಿತು.
ಹೃದಯ ರೋಗ ತಜ್ಞ ಡಾ. ನಿತಿನ್ ಗುದಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪರಿಸರ ಸಂರಕ್ಷಣೆಗೆ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವುದು ಅವಶ್ಯಕವಾಗಿದೆ. ಒಕ್ಕೂಟ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಸ್ವಚ್ಛ, ಹಸಿರು ಹಾಗೂ ಆರೋಗ್ಯಕರ ಬೀದರ್ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು. ಈ ದಿಸೆಯಲ್ಲಿ ನಡೆಯುವ ಚಟುವಟಿಕೆಗಳಿಗೆ ಕೈಜೋಡಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ರವಿ ಮೂಲಗೆ ನುಡಿದರು.
ಒಕ್ಕೂಟದ ಕಾರ್ಯದರ್ಶಿ ಅನಿಲ್ ಖೇಣಿ, ಸದಸ್ಯರಾದ ಹಾವಶೆಟ್ಟಿ ಪಾಟೀಲ, ಗುರುರಾಜ ಸ್ವಾಮಿ, ಸತೀಶ್ ನೌಬಾದೆ, ಕಾರ್ತಿಕ ರೆಡ್ಡಿ, ಅನಿಲಕುಮಾರ ಔರಾದೆ, ಮನೋಹರ ದಿಕ್ಷಿತ್ ಇದ್ದರು.