ಜಿಲ್ಲೆ

ವಿಸ್ಡಂ ಕಾಲೇಜಿಗೆ ಉತ್ತಮ ಫಲಿತಾಂಶ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನೀಟ್ ಪರೀಕ್ಷೆಯಲ್ಲಿ ಇಲ್ಲಿನ ವಿಸ್ಡಂ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ.

ಕೆಟೆಗರಿ ವಿಭಾಗದಲ್ಲಿ ಮಹ್ಮದ್ ಇಸ್ಮಾಯಿಲ್ ಮಹ್ಮದ್ ಅಖಿಲ್ (545 ಅಂಕ) 6,266ನೇ ರ್ಯಾಂಕ್, ಮಹೇಕ್ ಕೌಸರ್ (530) 10,754ನೇ ರ್ಯಾಂಕ್, ಶಹಾನಾ ಫಿರ್ದೋಸ್ (508) 20,343ನೇ ರ್ಯಾಂಕ್, ಸೈಯದ್ ಫೈಜಾನುದ್ದಿನ್ (489), 31,323ನೇ ರ್ಯಾಂಕ್, ಮದಿಹಾ ಕೌಸ್ ಸೈಯದ್ ಸಲೀಂ (484) 34,585ನೇ ರ್ಯಾಂಕ್ ಹಾಗೂ ತಹಿನಿಯತ್ ಶಮ್ಸ್ (460 ಅಂಕ) 51,147ನೇ ರ್ಯಾಂಕ್ ಗಳಿಸಿದ್ದಾರೆ. ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ ಬಿಡಿಎಸ್ ಸೀಟುಗಳನ್ನು ಪಡೆಯಲಿದ್ದಾರೆ. 60ಕ್ಕೂ ಅಕ ವಿದ್ಯಾರ್ಥಿಗಳಿಗೆ ಬಿಎಎಂಎಸ್, ಬಿಯುಎಂಎಸ್ ಹಾಗೂ ಬಿಎಚ್ಎಂಎಸ್ ಸೀಟು ಸಿಗುವ ನಿರೀಕ್ಷೆ ಇದೆ. ನೀಟ್ ನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದಾರೆ ಎಂದು ಕಾಲೇಜಿನ ಕಾರ್ಯದರ್ಶಿ ಮಹ್ಮದ್ ಆಸಿಫೊದ್ದೀನ್ ತಿಳಿಸಿದ್ದಾರೆ.