ಜಿಲ್ಲೆ

ವತ್ಸಲಾ ಎಚ್ಎಂ ರೇವಣ್ಣಗೆ ಶ್ರದ್ಧಾಂಜಲಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಾಜಿ ಸಚಿವರೂ ಆದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಪತ್ನಿ ವತ್ಸಲಾ ಅವರಿಗೆ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ನಗರದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶ್ರೀ ಸಾಯಿ ಆದರ್ಶ ಪಬ್ಲಿಕ್ ಶಾಲೆಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರೆ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಸಚಿನ್ ಮಲ್ಕಾಪುರ, ಸಂಜೀವಕುಮಾರ ಅತಿವಾಳೆ, ತುಳಸಿರಾಮ ಉಚ್ಚೆ, ಪುಂಡಲೀಕ ಇಟಕಂಪಳ್ಳಿ, ಕಲ್ಯಾಣರಾವ್ ಅಡಸಾರೆ, ಪ್ರಶಾಂತ ಶರಗಾರ, ಗಣಪತಿ ಕಮಠಾಣ, ಬಾಲಾಜಿ ಕೊಳಾರ, ಲಾಲಪ್ಪ ಕೊಳಾರ, ಸಂಜು ಕಮಠಾಣ, ಸಂತೋಷಕುಮಾರ ಜೋಳದಾಪಕೆ, ಲೋಕೇಶ ಮೇತ್ರೆ ಮರ್ಜಾಪುರ, ಬಾಬು ಹೊಕ್ರಾಣೆ, ನಾಗರಾಜ, ಮೊಗಲಪ್ಪ, ಅಮೀತ್ ಸೋಲಪುರ, ಕುಶಾಲ್ ಮರಕಲ್, ಕುಮಾರ ನಿಜಾಂಪುರ ಮತ್ತಿತರರು ಇದ್ದರು.