ಬೀದರ್: ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜ ಪಾಟೀಲ ಹಾರೂರಗೇರಿ ಆಯ್ಕೆಯಾಗಿದ್ದಾರೆ.
ಪಾಟೀಲ ಸಂಘದ ವಿವಿಧ ಹುದ್ದೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು. ಸಂಘದ ಸಾರಥ್ಯದ ಹೊಣೆ ಈಗ ಅವರ ಹೆಗಲೇರಿದೆ.
ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ನಗರದಲ್ಲಿ ನಡೆದ ಸಭೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ಪದಾಧಿಕಾರಿಗಳ ಹೆಸರು ಹೀಗಿವೆ. ಅಶೋಕಕುಮಾರ ನಾಗರಾಳೆ (ಉಪಾಧ್ಯಕ್ಷ), ವಿಜಯಕುಮಾರ ಬಿರಾದಾರ (ಪ್ರಧಾನ ಕಾರ್ಯದರ್ಶಿ), ಮಹಮ್ಮದ್ ಎತೆಶಾಮುಲ್ ಹಕ್ (ಜಂಟಿ ಕಾರ್ಯದರ್ಶಿ), ಸಿದ್ರಾಮಪ್ಪ ಆನಂದೆ (ಖಜಾಂಚಿ), ರಾಜೇಂದ್ರ ನಮೋಶಿ, ಸಾಯಿಬಣ್ಣ ಅಂಬಾಟೆ, ಸೂರ್ಯಕಾಂತ ಆಗ್ರೆ, ಕಿರಣ ಉಪ್ಪೆ, ಮಹಮ್ಮದ್ ಇಲಿಯಾಸ್, ಬಸವರಾಜ ಭೂಶೆಟ್ಟಿ, ರಾಜಕುಮಾರ ನವಾಡೆ, ದತ್ತಾತ್ರೆ ಕದಂ, ಜಗನ್ನಾಥ ಕಾಡಾದೆ, ಗಣೇಶ ಐನಾಪುರೆ ಹಾಗೂ ಎಂ.ಡಿ. ನಯಿಮುದ್ದೀನ್ (ಸದಸ್ಯರು).