ಜಿಲ್ಲೆ

ಕಾಂಗ್ರೆಸ್ ಸಹಕಾರ ವಿಭಾಗಕ್ಕೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸಹಕಾರ ವಿಭಾಗದ ಅಧ್ಯಕ್ಷರಾಗಿ ಹಿರಿಯ ಮುಖಂಡ ಧನರಾಜ ಎಸ್.ತಾಳಂಪಳ್ಳಿ ಅವರನ್ನು ನೇಮಕ ಮಾಡಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿ ಕೂಡಲೇ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಮಾರ್ಗದರ್ಶನ, ರಾಜ್ಯ ನಾಯಕರ ಸಹಕಾರದಿಂದ ವಿಭಾಗದ ಸಂಘಟನೆ ಮತ್ತು ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ಸೂಚಿಸಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದು ತಾಳಂಪಳ್ಳಿ ಹೇಳಿದ್ದಾರೆ.