ಜಿಲ್ಲೆ

ಅಭಿವೃದ್ಧಿಯ ಹರಿಕಾರ ಸಚಿವ ವಿ. ಸೋಮಣ್ಣ

ರೇವಣಸಿದ್ದಪ್ಪ ಪಾಟೀಲ್
ಬೀದರ್‌: ದೇಶದ ಅಭಿವೃದ್ಧಿಯಲ್ಲಿ ಕೇಂದ್ರದ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಬಸವ ಅನುಯಾಯಿ ಆಗಿರುವ ಅವರ ಅಭಿವೃದ್ಧಿ ಪರ ಚಿಂತನೆಗಳು ರಾಜ್ಯದ ರೈಲ್ವೆ ಹಾಗೂ ಜಲ ಶಕ್ತಿ ಯೋಜನೆಗಳ ಮಹಾಪೂರಕ್ಕೆ ಕಾರಣವಾಗಿವೆ ಎಂದು ಜಿ.ಕೆ ಕನ್ಸ್ಟ್ರಕ್ಷನ್ಸ್‌ ಸಂಸ್ಥಾಪಕರಾದ ಹಿರಿಯ ಉದ್ಯಮಿ ಗುರುನಾಥ ಕೊಳ್ಳೂರ್‌ ಶ್ಲಾಘಿಸಿದರು.
ಅವರು ತಮ್ಮ ಸ್ವಗೃಹಕ್ಕೆ ಆಗಮಿಸಿದ್ದ ಸಚಿವ ವಿ. ಸೋಮಣ್ಣ ಅವರಿಗೆ ಮಹಾತ್ಮ ಬಸವೇಶ್ವರರ ಮೂರ್ತಿ ನೀಡಿ ಸನ್ಮಾನಿಸಿ ಮಾತನಾಡಿ, ವಿ. ಸೋಮಣ್ಣ ಅವರು ಕರ್ನಾಟಕಕ್ಕೆ ಹಲವಾರು ರೈಲ್ವೆ ಯೋಜನೆಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಅದರಲ್ಲೂ ಬೀದರ್‌ ಜಿಲ್ಲೆಗೆ ಇತ್ತೀಚೆಗೆ ಹೆಚ್ಚಿನ ನೆರವು ಸಿಕ್ಕಿದೆ ಎಂದರು.
ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ಗುರುನಾಥ ಕೊಳ್ಳೂರ್‌ ಅವರ ಕಾಯಕ ಶ್ರದ್ಧೆ ಮೆಚ್ಚುವಂಥದ್ದು, ಅವರ ಸೇವಾ ಮನೋಭಾವ ಮಾದರಿಯಾಗಿದೆ ಎಂದು ನುಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬಸವಗಿರಿಯ ಅಕ್ಕ ಗಂಗಾಂಬಿಕೆ, ಜಿ.ಕೆ ಕನ್ಸ್ಟ್ರಕ್ಷನ್ಸ್‌ ಎಂಡಿ ಸಚಿನ್‌ ಕೊಳ್ಳೂರ್‌ ಸೇರಿದಂತೆ ಕೊಳ್ಳೂರ್ ಕುಟುಂಬ ಸದಸ್ಯರು ಇದ್ದರು.