ಬಸವಕಲ್ಯಾಣ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಪ್ರವಾಸಿಗರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿ ಮಾಡಿರುವ ಭಾರತೀಯ ಸೈನಿಕರ ಕಾರ್ಯ ಮತ್ತು ಶೌರ್ಯ ಶ್ಲಾಘನೀಯ. ಯೋಧರ ಜತೆ ದೇಶದ ಪ್ರತಿಯೊಬ್ಬರೂ ಇದ್ದಾರೆ ಎಂದು ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ತಿಳಿಸಿದ್ದಾರೆ.