ಬೀದರ್: ಕಾಶ್ಮೀರದ ಪಹಲ್ಗಾಮ್‍ನಲ್ಲಿ ಅಮಾಯಕ ಪ್ರವಾಸಿಗರನ್ನು ಬಲಿ ಪಡೆದಿದ್ದ ಉಗ್ರರಿಗೆ ಆಪರೇಷನ್ ಸಿಂಧೂರ ಮೂಲಕ ಭಾರತ ಸರ್ಕಾರ ತಕ್ಕ ಪಾಠ ಕಲಿಸಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಿರಿಯ ಮುಖಂಡ ರೇವಣಸಿದ್ದ ಜಾಡರ್ ಪ್ರತಿಕ್ರಿಯಿಸಿದ್ದಾರೆ.
ಪೈಶಾಚಿಕ ಕೃತ್ಯ ಎಸಗಿದ್ದ ಉಗ್ರರ ತರಬೇತಿಯ ಪಾಕಿಸ್ತಾನದಲ್ಲಿನ 9 ನೆಲೆಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿರುವುದು ದೇಶದ ಜನರಿಗೆ ಸಂತಸ ಉಂಟು ಮಾಡಿದೆ. ಇದರಿಂದ ಭಾರತ ಶಾಂತಿ ಪ್ರಿಯ ದೇಶ. ಆದರೆ, ವೈರಿ ರಾಷ್ಟ್ರಗಳ ಪ್ರಚೋದಿತ ಭಯೋತ್ಪಾದಕ ದಾಳಿಗಳನ್ನು ಸಹಿಸಲ್ಲ ಎಂಬ ಸಂದೇಶವೂ ರವಾನೆಯಾಗಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಂಡ ಕೇಂದ್ರ ಸರ್ಕಾರದ ಕ್ರಮಕ್ಕೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿದೆ. ಇಸ್ರೇಲ್ ಸೇರಿದಂತೆ ಅನೇಕ ದೇಶಗಳು ಭಾರತದ ನಡೆಯನ್ನು ಬೆಂಬಲಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.