ಜಿಲ್ಲೆ

ಬಸವಣ್ಣನವರ ನೂತನ ಕಟ್ಟೆ ಉದ್ಘಾಟನೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ನೌಬಾದ್‍ನ ಚೌಳಿ ರಸ್ತೆಯಲ್ಲಿನ  ಸಹ್ಯಾದ್ರಿ ಲೇಔಟ್‍ನಲ್ಲಿ ಬಸವಣ್ಣನವರ ನೂತನ ಕಟ್ಟೆ ಹಾಗೂ ಬಸವ ಭವನದ ನಾಮಫಲಕವನ್ನು ಉದ್ಘಾಟಿಸಲಾಯಿತು.

ಬಸವಣ್ಣನವರ ತತ್ವಗಳ ಅನುಕರಣೆಯಿಂದ ವಿಶ್ವವೇ ಶಾಂತಿಯ ತೋಟವಾಗಲಿದೆ ಎಂದು ಉದ್ಘಾಟನೆ ನೆರವೇರಿಸಿದ ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ ಹೇಳಿದರು.

ನೂತನ ಬಡಾವಣೆಯ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಬಡಾವಣೆ ನಿವಾಸಿಗಳು ಉದ್ಯಾನಕ್ಕೆ ಜಗಜ್ಯೋತಿ ಬಸವಣ್ಣನವರ ಹೆಸರು ಇಟ್ಟಿರುವುದು ಹಾಗೂ ಬಸವ ಭವನ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಮುಖಂಡ ಸಂಗಮೇಶ ಹುಮನಾಬಾದೆ ಹೇಳಿದರು.

ಪ್ರಮುಖರಾದ ಸಂತೋಷ್ ಭಂಗೂರೆ, ಸಂಜೀವ್ ಸೋನಾರೆ, ಬಾಬುರಾವ್ ಗುದಗೆ, ಶಿವರಾಯ ಮುದಾಳೆ, ಹಾವಗಿ ಮುದಾಳೆ, ವೀರಶೆಟ್ಟಿ ಚನಶೆಟ್ಟಿ, ಶಿವರಾಜ ರಟಕಲೆ, ವೈಜಿನಾಥ ಬಾವಗೆ, ಮಲ್ಲಿಕಾರ್ಜುನ ಗಂಗೂ, ಜ್ಞಾನೇಶ್ವರ ವಗ್ಗೆ, ಧನರಾಜ ಮಿರಕಲೆ, ಕೃಷಿಕ ಸಮಾಜದ ಅಧ್ಯಕ್ಷ ಗುಣವಂತರಾವ್ ಸಿಂಧೆ, ಶಿವಶರಣಪ್ಪ ಪಾಟೀಲ ಕೊಳಾರ, ಕರಬಸಯ್ಯ ಸ್ವಾಮಿ, ಬಸವರಾಜ ಬಿರಾದಾರ ಇದ್ದರು.

ಬಡಾವಣೆಯ ಪ್ರಮುಖ ರಮೇಶ ಚಿದ್ರಿ ನಿರೂಪಿಸಿದರು.