ಜಿಲ್ಲೆ

ಆದಿಜಾಂಬವ ಸಂಘ ಸಭೆ 30ರಂದು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಆದಿಜಾಂಬವ ಸಂಘದ ಜಿಲ್ಲಾ ಘಟಕ ಸಭೆ ಬುಧವಾರ ಮಧ್ಯಾಹ್ನ 1ಕ್ಕೆ ಇಲ್ಲಿನ ಕುಂಬರವಾಡ ಕ್ರಾಸ್ ಹತ್ತರದ ಮುಚಳಂಬೆ ಫಂಕ್ಶನ್ ಹಾಲ್ನಲ್ಲಿ ಕರೆಯಲಾಗಿದೆ ಎಂದು ಸಂಘ ರಾಜ್ಯ ಹಿರಿಯ ಉಪಾಧ್ಯಕ್ಷ ಡಾ.ರಾಜು ಕಡ್ಯಾಳ್ ತಿಳಿಸಿದ್ದಾರೆ.

ಸಂಘದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಹಾಗೂ ಪರಿಶಿಷ್ಟ ಜಾತಿಗಳ ಸಮೀಕ್ಷೆ ಕುರಿತು ಜಾಗೃತಿ ಮೂಡಿಸಲು ಸಭೆ ನಡೆಯಲಿದೆ. ಸಂಘದ ಜಿಲ್ಲಾ, ತಾಲೂಕು ಪದಾಧಿಕಾರಿಗಳು, ಚಿಂತಕರು, ಹೋರಾಟಗಾರರು ಆಗಮಿಸಿ ಸಲಹೆ ನೀಡಬೇಕು ಎಂದು ತಿಳಿಸಿದ್ದಾರೆ.