ಬೀದರ್: ಶಿಕ್ಷಣದಲ್ಲಿ ಭಾರತೀಯತೆ ತರಲು ಐದು ಪ್ರಮುಖ ಸೂತ್ರಗಳಿವೆ ಎಂದು ಕರ್ನಾಟಕ ಬಿ.ಎಡ್. ಕಾಲೇಜು ಪ್ರಾಚಾರ್ಯ ಡಾ. ಸಂತೋಷ ಮಲಶೆಟ್ಟಿ ಹೇಳಿದರು.
ಋಷಿಕೇಶ ಶಿಕ್ಷಣ ಸಂಸ್ಥೆ ಸಂಚಾಲಿತ ಇಲ್ಲಿಯ ಅರುಣೋದಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಭಾರತೀಯ ಶಿಕ್ಷಣ ಮಂಡಲ ಸಂಸ್ಥಾಪನಾ ದಿನ ಹಾಗೂ ರಾಮ ನವಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆ, ಅನ್ವಯ, ಜಾಗೃತಿ, ಪ್ರಕಾಶನ ಹಾಗೂ ಸಂಘಟನೆಯೇ ಸೂತ್ರಗಳಾಗಿವೆ ಎಂದು ತಿಳಿಸಿದರು.
ಸ್ವಸ್ಥ ಹಾಗೂ ಸಮೃದ್ಧ ಸಮಾಜ ಕಟ್ಟಲು ಭಾರತೀಯ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.
ಜ್ಯಾಂತಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಗೌರೀಶ್ ಬಿರಾದಾರ ಮಾತನಾಡಿ, ಶಿಕ್ಷಣದಲ್ಲಿ ಭಾರತೀಯಣತೆ ತರುವುದು ಭಾರತೀಯ ಶಿಕ್ಷಣ ಮಂಡಲದ ಉದ್ದೇಶವಾಗಿದೆ ಎಂದು ತಿಳಿಸಿದರು.
ಎಷ್ಟೇ ಶಿಕ್ಷಣ ಪಡೆದರೂ ಅದರಲ್ಲಿ ಮಾನವೀಯ ಮೌಲ್ಯಗಳಿಲ್ಲದಿದ್ದರೆ ವ್ಯರ್ಥ. ಹೀಗಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ ಮಂಗಳೂರೆ ಹೇಳಿದರು.
ವಿದ್ಯಾಶ್ರೀ ಶಾಲೆಯ ಸಹ ಶಿಕ್ಷಕ ಸಂತೋಷ ಸೋಲಪುರೆ ಮಾತನಾಡಿದರು. ಸಹ ಶಿಕ್ಷಕರಾದ ವೀರೇಶ ಮಂಗಳೂರೆ, ಮಾರುತೆಪ್ಪ ಉಪಸ್ಥಿತರಿದ್ದರು.
ಸಾರಿಕಾ ಬಿರಾದಾರ ನಿರೂಪಿಸಿದರು. ರೇವಮ್ಮ ಪಟ್ನೆ ಸ್ವಾಗತಿಸಿದರು. ರೇಣುಕಾ ಹಳೆಂಬರೆ ವಂದಿಸಿದರು.