ಜಿಲ್ಲೆ

ವಕೀಲರ ಸಂಘ: ಡಾ. ಅಂಬೇಡ್ಕರ್ ಜಯಂತಿ ಆಚರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರ ಪೂಜೆ ಸಲ್ಲಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ (ಪುಟ್ಟು) ಪಾಟೀಲ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಖಜಾಂಚಿ ಪ್ಯಾರುಸಾಬ್, ವಕೀಲರಾದ ವಿ.ಕೃಷ್ಣಪ್ಪ, ಹಣಮಂತರಾವ್ ಸಿಂದೋಲ್, ಪ್ರಲ್ಹಾದ್ ಕಟ್ಟಿಮನಿ, ರಮೇಶ್ ವಾಗರಾಜ್, ನಾಗೇಂದ್ರ ಬಲ್ಲೂರೆ, ಬಂಡೆಪ್ಪ ಹಜನಾಳ, ಅಂಬಾದಾಸ ವಾಗರಾಜ, ಮಾಯಾದೇವಿ, ಮುರಳಿಧರ, ಸುದರ್ಶನ್, ರಮಾ, ರವಿಕುಮಾರ ಡಾಯಿಜೋಡೆ ಮತ್ತಿತರರು ಇದ್ದರು.