ಜಿಲ್ಲೆ

ಶಿಷ್ಯವೇತನ: 12, 19 ರಂದು ಪರೀಕ್ಷೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ದಿ ಇನ್ಫಿನಿಟಿ ಶಾಲೆಯು 8 ರಿಂದ 10ನೇ ತರಗತಿಯಲ್ಲಿ ಪ್ರವೇಶ ಪಡೆಯುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏಪ್ರಿಲ್ 12 ಹಾಗೂ 19 ರಂದು ಶಿಷ್ಯವೇತನ ಪರೀಕ್ಷೆ ಹಮ್ಮಿಕೊಂಡಿದೆ.

ಪರೀಕ್ಷೆಯಲ್ಲಿ ಶೇ 90 ಮೇಲ್ಪಟ್ಟು ಅಂಕ ಪಡೆದವರಿಗೆ ಶುಲ್ಕದಲ್ಲಿ ಶೇ 50, ಶೇ 75 ಮೇಲ್ಪಟ್ಟು ಅಂಕ ಗಳಿಸಿದವರಿಗೆ ಶೇ 25 ರಷ್ಟು ರಿಯಾಯಿತಿ ಕಲ್ಪಿಸಲಾಗುವುದು ಎಂದು ಶಾಲೆಯ ಪ್ರಾಚಾರ್ಯೆ ಲಕ್ಷ್ಮಿ ಮುಗಳಿ ತಿಳಿಸಿದ್ದಾರೆ.

ಪರೀಕ್ಷೆಗೆ ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9019484190 ಅಥವಾ 959199002ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.