ಜಿಲ್ಲೆ

ಶ್ರೀಮಂಡಲ ಜಾತ್ರೆಗೆ ಚಾಲನೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಶ್ರೀಮಂಡಲ ಗ್ರಾಮದಲ್ಲಿ ಶ್ರೀ ಮಹಾದೇವ ಮಂದಿರದ 36ನೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಶ್ರೀ ಪ್ರಶಾಂತ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರೆ ನಿಮಿತ್ತ ಏ.9ರವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಏ.7ರವರೆಗೆ ನಡೆಯುವ ಸುವರ್ಣಾ ಚಿಮಕೋಡೆ ಅವರ ಅಕ್ಕನ ದರ್ಶನ ಪ್ರವಚನಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು. ನಿತ್ಯ ಸಂಜೆ 7.30ಕ್ಕೆ ಪ್ರವಚನ ನಡೆಯಲಿದೆ. ಭಾನುವಾರ ಶಿವಮಾಲ ಹಾಕಿಕೊಳ್ಳುವುದು ಹಾಗೂ ನಂದಿ ಮೂರ್ತಿ ಉದ್ಘಾಟನೆ ಮಾಡಲಾಗಿದೆ.

ಏ.8ರಂದು ಸಂಜೆ 6.30ಕ್ಕೆ ಗಂಗಾ ನದಿಯಲ್ಲಿ ದೀಪ ಬಿಡುವುದು, 7ಕ್ಕೆ ಅಗ್ನಿ ಪೂಜೆ, 7.30ಕ್ಕೆ ಶಿವ ಪಾರ್ವತಿ ಲಗ್ನ, ತೊಟ್ಟಿಲು ಕಾರ್ಯಕ್ರಮ ಇದೆ. ನಂತರ ವೇದಿಕೆ ಕಾರ್ಯಕ್ರಮ ಇದೆ. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಪ್ರಮುಖರಾದ ಸೂರ್ಯಕಾಂತ ನಾಗಮಾರಪಳ್ಳಿ, ವಿಜಯಕುಮಾರ ಎ.ಪಾಟೀಲ್ ಗಾದಗಿ, ವಿಜಯಕುಮಾರ ಆನಂದೆ ಇತರರು ಪಾಲ್ಗೊಳ್ಳುವರು. ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ. 9ರಂದು ಬೆಳಗ್ಗೆ 7ಕ್ಕೆ ಹನುಮಾನ ಮಂದಿರದಿಂದ ಮಹಾದೇವ ದೇವಸ್ಥಾನವರೆಗೆ ಪಲ್ಲಕ್ಕಿ ಮೆರವಣಿಗೆ, ನಂತರ ಅಗ್ನಿ ಪ್ರವೇಶ, ಬೆಳಗ್ಗೆ 10ಕ್ಕೆ ಕುಸ್ತಿ ಸ್ಪರ್ಧೆ ಇದೆ. ಕಾರ್ಯಕ್ರಮಕ್ಕೆ ಸ್ಥಳೀಯರು, ಸುತ್ತಮುತ್ತಲಿನ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯಬೇಕು ಎಂದು ನಾಗಶೆಟ್ಟಿ ಮಹಾರಾಜವಡೆ ಮನವಿ ಮಾಡಿದ್ದಾರೆ.