ಜಿಲ್ಲೆ

ಹುತಾತ್ಮ ದಿನ: ಕಮಠಾಣದಲ್ಲಿ ಜಾಥಾ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಹುತಾತ್ಮ ದಿನದ ಅಂಗವಾಗಿ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ನೆಹರೂ ಯುವ ಕೇಂದ್ರ, ಭಗತ್‍ಸಿಂಗ್ ಯುವಕ ಸಂಘ ಹಾಗೂ ದಿ ರೋಶನ್ ಪ್ಲಾನೆಟ್ ಪದವಿಪೂರ್ವ ವಿಜ್ಞಾನ ಕಾಲೇಜು ವತಿಯಿಂದ ಈಚೆಗೆ ಜಾಥಾ ನಡೆಯಿತು.

ದಿ. ರೋಶನ್ ಪ್ಲಾನೆಟ್ ಪದವಿಪೂರ್ವ ವಿಜ್ಞಾನ ಕಾಲೇಜಿನಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

ಕಾಲೇಜು ಅಧ್ಯಕ್ಷ ಶಫಿಯೊದ್ದೀನ್, ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಭಗತ್‍ಸಿಂಗ್ ಯುವಕ ಸಂಘದ ಅಧ್ಯಕ್ಷ ಸೋಮನಾಥ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.