ಬೀದರ್: ಆರ್ಟ್ ಆಫ್ ಲಿವಿಂಗ್ ವತಿಯಿಂದ ನಗರದ ಗುಂಪಾ ರಸ್ತೆಯಲ್ಲಿ ಇರುವ ರಾಮಚೌಕ್ ಸಮೀಪದ ಹನುಮಾನ ಮಂದಿರದ ಎದುರು ಮಾ. 26 ರಿಂದ 31 ರ ವರೆಗೆ ಆನಂದ ಅನುಭೂತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಬೀದರ್ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಕಾಮಶೆಟ್ಟಿ ಚಿಕ್ಕಬಸೆ ತಿಳಿಸಿದ್ದಾರೆ.
ಬೆಳಿಗ್ಗೆ 6 ರಿಂದ 8 ಹಾಗೂ ಸಂಜೆ 6 ರಿಂದ 8 ರ ವರೆಗೆ ಶಿಬಿರ ನಡೆಯಲಿದೆ ಎಂದು ಹೇಳಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕರಾದ ಅಶೋಕ ಎಸ್. ಮಂದಕನಳ್ಳಿ ಹಾಗೂ ಶಿವಾನಂದ ಮಡಿವಾಳ ಅವರು ಯೋಗ, ಧ್ಯಾನ, ಪ್ರಾಣಾಯಾಮ, ಉಸಿರಾಟ ಪ್ರಕ್ರಿಯೆ ಹಾಗೂ ಸುದರ್ಶನ ಕ್ರಿಯೆಗಳನ್ನು ಹೇಳಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.
ಆಸಕ್ತರು ಹೆಸರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7022513111 ಅಥವಾ 7259838372 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.