ಜಿಲ್ಲೆ

300 ಜನರ ಉಚಿತ ಆರೋಗ್ಯ ತಪಾಸಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯ ಸೇಡಂಕರ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಶಿಬಿರದಲ್ಲಿ 300 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.

ರಕ್ತದೊತ್ತಡ, ಮಧುಮೇಹ, ಬೆನ್ನು ನೋವು, ಕೀಲು ನೋವು, ಮೊಳಕಾಲು ನೋವು ಮೊದಲಾದ ತಪಾಸಣೆಗಳನ್ನು ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವ 50 ಜನರನ್ನು ಯಶಸ್ವಿನಿ ಹಾಗೂ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಅವರು, ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕು ಎಂದು ಹೇಳಿದರು.

ಹಿಂದೆ ಬೀದರ್ ದಕ್ಷಿಣದ ಜನ ತುರ್ತು ಚಿಕಿತ್ಸೆಗಾಗಿ ಬೀದರ್‍ಗೆ ತೆರಳಬೇಕಾಗಿತ್ತು. ಸೇಡಂಕರ್ ಅವರ ಆಸ್ಪತ್ರೆ ಶಾಖೆಯಿಂದ ಜನರಿಗೆ ಅನುಕೂಲವಾಗಿದೆ. ಸೇಡಂಕರ್ ಅವರು ಉಚಿತ ಆರೋಗ್ಯ ಶಿಬಿರಗಳ ಮೂಲಕ ಜನ ಸಾಮಾನ್ಯರಿಗೆ ನೆರವಾಗುತ್ತಿದೆ. ರೋಗಿಗಳಿಗೆ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.

ಡಾ. ರಾಜಶೇಖರ ಸೇಡಂ ಅವರು ಅವರು ಆಸ್ಪತ್ರೆಯ ಸೇವೆಗಳ ಕುರಿತು ಮಾತನಾಡಿದರು. ಚಿಟಗುಪ್ಪದ ಸದ್ಭೋದಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶ ಪಾರಾ, ಕಾರ್ಯದರ್ಶಿ ಸಿದ್ದು ಪಾಟೀಲ, ಮುಖಂಡ ಬಸವರಾಜ ಮಾಳಗೆ, ಆಸ್ಪತ್ರೆಯ ಆಡಳಿತಾಧಿಕಾರಿ ಕೃಷ್ಣ ಪಾಟೀಲ ಮತ್ತಿತರರು ಇದ್ದರು.

ಆಸ್ಪತ್ರೆ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಹಾಗೂ ಡಾ. ರಾಜಶೇಖರ ಸೇಡಂಕರ್ ಅವರು ವೈದ್ಯ ವೃತ್ತಿಯಲ್ಲಿ 25 ವರ್ಷ ಪೂರೈಸಿದ ಪ್ರಯುಕ್ತ ಶಿಬಿರ ಹಮ್ಮಿಕೊಳ್ಳಲಾಗಿತ್ತು.