ಜಿಲ್ಲೆ

ಗಜಾನನ ಕೋ ಆಪರೇಟಿವ್: ಮಹಿಳಾ ದಿನಾಚರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬಸವಕಲ್ಯಾಣದ ಜೈ ಗಜಾನನ ಕ್ರೇಡಿಟ್ ಕೋ ಆಪರೇಟಿವ್ ಶಾಖೆ ಕಚೇರಿಯಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ನಗರ ಪೊಲೀಸ್ ಠಾಣೆ ಪಿಎಸ್‍ಐ ಸುರೇಶ್ ಹಜ್ಜರಗೆ ಅವರು, ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಕೋ ಆಪರೇಟಿವ್ ಅಧ್ಯಕ್ಷ ವಿಜಯಕುಮಾರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು.

ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಅರ್ಜುನ ಕನಕ, ಎಎಸ್‍ಐ ಕನ್ಯಾಕುಮಾರಿ, ಕೋ ಆಪರೇಟಿವ್‍ನ ಭಾಲ್ಕಿ ಮುಖ್ಯ ಶಾಖೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವಕುಮಾರ ಕನಕೇರಿ, ವಿಜಯ ಬಿರಾದಾರ, ಬಸವಕಲ್ಯಾಣ ಶಾಖೆ ವ್ಯವಸ್ಥಾಪಕ ಸೂರಜ್ ಪಾಟೀಲ ಮತ್ತಿತರರು ಇದ್ದರು.