ಜಿಲ್ಲೆ

ಪುನೀತ್ ರಾಜಕುಮಾರ ಜನ್ಮದಿನ ಆಚರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸ್ಫೂರ್ತಿ ಫೌಂಡೇಷನ್ ವತಿಯಿಂದ ನಗರದ ಫೌಂಡೇಷನ್ ಕಚೇರಿಯಲ್ಲಿ ಸೋಮವಾರ ಚಿತ್ರನಟ ಪುನೀತ್ ರಾಜಕುಮಾರ ಅವರ 50ನೇ ಜನ್ಮದಿನ ಆಚರಿಸಲಾಯಿತು.

ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಜನ್ಮದಿನದ ನಿಮಿತ್ತ ಫೌಂಡೇಷನ್‍ನ ಪದಾಧಿಕಾರಿಗಳು ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.

ಪುನೀತ್ ರಾಜಕುಮಾರ ಅವರ ಸಾಮಾಜಿಕ ಕಾಳಜಿ ಹಾಗೂ ಮಾನವೀಯ ಸೇವೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಫೌಂಡೇಷನ್ ಅಧ್ಯಕ್ಷ ತುಕಾರಾಮ ಔದತ್ತಪುರ ಹೇಳಿದರು.

ಪ್ರಮುಖರಾದ ಸಂಜೀವಕುಮಾರ ಅಲ್ಲೂರೆ, ನಾಗಶೆಟ್ಟಿ ಮಲ್ಕಾಪುರ, ನಾಗೇಶ ಚಿಟ್ಟಾ, ಗುರು ಎಂ. ರಾಮನಗರ, ಸುಧಾಕರ ಕುತ್ತಾಬಾದ್, ನಾಮದೇವ ಬೋರಳಪಾಟಿ, ಸತೀಶ್ ವಣಗೇರೆ, ಯಲ್ಲಾಲಿಂಗ ಔದತ್ತಪುರ ಹಾಜರಿದ್ದರು.