ಬೀದರ್: ಇಲ್ಲಿಯ ಆಕ್ಸಿಲೈಫ್ ಆಸ್ಪತ್ರೆಯಲ್ಲಿ ಎಕ್ಸೆಸ್ ಲೈವಲಿಹುಡ್ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ಮಹಿಳಾ ದಿನದ ಮಹತ್ವ ಹಾಗೂ ಸ್ತ್ರೀ ಸಮಾನತೆ ಕುರಿತು ಡಾ. ಚಿನ್ನಮ್ಮ ಗಾದಗಿ, ಡಾ. ಪ್ರಿಯಾ ಗಾದಗಿ, ಡಾ. ಪ್ರೀತಿ ಬಿರಾದಾರ, ಡಾ. ಸುಮಾಬಾಯಿ ಶಿಂಧೆ, ಸಿದ್ದಮ್ಮ ಹಂಗರಗಿ, ಕವಿತಾ ಮಾತನಾಡಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅನಮೋಲ್ ಮೋದಿ ಅಧ್ಯಕ್ಷತೆ ವಹಿಸಿದ್ದರು. ಎಕ್ಸೆಸ್ ಲೈವಲಿಹುಡ್ ಯೋಜನಾಧಿಕಾರಿ ಮಹಮ್ಮದ್ ಸಿರಾಜ್, ಆಕ್ಸಿಲೈಫ್ ಆಸ್ಪತ್ರೆ ಹಾಗೂ ಎಕ್ಸೆಸ್ ಲೈವಲಿಹುಡ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.