ಜಿಲ್ಲೆ

ಗಮನ ಸೆಳೆದ ಜಾನುವಾರ ಪ್ರದರ್ಶನ

ರೇವಣಸಿದ್ದಪ್ಪ ಪಾಟೀಲ್

ಔರಾದ್: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೈದಾನದಲ್ಲಿ ಉದ್ಭವಲಿಂಗ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಜಾನುವಾರುಗಳ ಪ್ರದರ್ಶನ ನಡೆಯಿತು.

ಜಿಲ್ಲೆ ಸೇರಿ ನೆರೆಯ ತೆಲಂಗಾಣ ಮತ್ತು ಮಹರಾಷ್ಟ್ರದಿಂದ ರೈತರು ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಜಾನುವಾರುಗಳನ್ನು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.

ಪ್ರದರ್ಶನದಲ್ಲಿ ಜಮಾಲಪುರ ಗ್ರಾಮದ ರೈತ ನರಸಿಂಗರಾವ ರಾವಣ ಪಾಟೀಲ್ ಅವರ ಎತ್ತಿಗೆ ಪ್ರಥಮ ಬಹುಮಾನ 10 ಸಾವಿರ ರೂ, ಮಹಾರಾಷ್ಟ್ರದ ಬರಭಣಿಯ ವಿಕ್ರಮ್ ಬಾಪುರಾವ ಚವ್ಹಾಣ್ ಅವರ ಹೋರಿಗೆ ದ್ವಿತೀಯ ಬಹುಮಾನ (7500 ರೂ.), ಪಟ್ಟಣದ ಖಂಡೇರಾವ ಕಿಶನರಾವ ಮಾಣಿ ಅವರ ಆಕಳಿಗೆ ತೃತೀಯ ಬಹುಮಾನ (5000 ರೂ.) ನೀಡಿ ಸತ್ಕರಿಸಲಾಯಿತು. ಅನೇಕರಿಗೆ ಸಮಾಧಾನಕರ ನಗದು ಬಹುಮಾನ ವಿತರಣೆ ಮಾಡಲಾಯಿತು.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಪಶು ಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಎಪಿಎಂಸಿ ಕಾರ್ಯದರ್ಶಿ ಸಂತೋಷಕುಮಾರ ಮುದ್ದಗೊಂಡ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಧೋಂಡಿಬಾ ನರೋಟೆ, ಸಿಪಿಐ ರಘುವೀರಸಿಂಗ್ ಠಾಕೂರ್, ವರ್ತಕರ ಸಂಘದ ಅಧ್ಯಕ್ಷ ರವೀಂದ್ರ ಮೀಸೆ, ಗೋರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಜ ಅಲ್ಮಾಜೆ, ಶಿವಾನಂದ ಮೊಕ್ತೆದಾರ್, ಭೀಮರಾವ ಸಿಂಧೆ, ರಾಜು ಕೌಠಾಳೆ, ನಾಗಪ್ಪ ಯಾಧವ್, ನಿಖಿಲ್ ಡೋಂಬಾಳೆ, ಆಶೋಕ ಶೆಂಬೆಳ್ಳಿ, ಅಂಬಾದಾಸ ನೇಳಗೆ ಇತರರಿದ್ದರು.