ಬೀದರ್: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಇಲ್ಲಿಯ ಕೆ.ಇ.ಬಿ. ಕಾಲೊನಿಯ ಗಣೇಶ್ವರ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಪತಂಜಲಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ವಿವಿಧ ಮಾದರಿಗಳು ನೋಡುಗರ ಗಮನ ಸೆಳೆದವು.
ಚಂದ್ರಯಾನ 3, ಶ್ವಾಶಕೋಶ ಕ್ರಿಯೆ, ನೀರಿನ ಚಕ್ರ, ನೀರು ಶುದ್ಧೀಕರಣ ಪ್ರಕ್ರಿಯೆ, ಕೇದಾರನಾಥ ದೇವಸ್ಥಾನ ಮತ್ತಿತರ ಮಾದರಿಗಳು ಪ್ರದರ್ಶನದಲ್ಲಿದ್ದವು.
ವಿದ್ಯಾರ್ಥಿಗಳು ಸ್ವತಃ ಸಿದ್ಧಪಡಿಸಿದ್ದ ಮಾದರಿಗಳ ಬಗ್ಗೆ ನಿರರ್ಗಳವಾಗಿ ಮಾಹಿತಿ ನೀಡಿ ಮೆಚ್ಚುಗೆ ಗಳಿಸಿದರು.
ಶಾಲೆಯ ಅಧ್ಯಕ್ಷೆ ಉಷಾ ಮಾರುತಿ ಮೇತ್ರೆ ಪ್ರದರ್ಶನವನ್ನು ಉದ್ಘಾಟಿಸಿದರು. ಪ್ರಮುಖರಾದ ರಾಹುಲ್ ಮಿಶ್ರಾ, ಸುರೇಂದ್ರ ರೊಡ್ಡೆ, ಮುಖ್ಯಶಿಕ್ಷಕಿ ಸುಪ್ರಿಯ ಕುಲಕರ್ಣಿ, ಶಾರದಾ, ಜ್ಯಾಂತಿಕರ್, ಶಿವಮಂಗಲಾ ಪಾಟೀಲ, ಅನಿತಾ ಕಾಂಬಳೆ, ಪೂಜಾ ಕೋಳಿ, ಪವಿತ್ರಾ ಸ್ವಾಮಿ ಇದ್ದರು.
ವನಿತಾ ಕುಲಕರ್ಣಿ ನಿರೂಪಿಸಿದರು. ಶಾಲೆಯ ಆಡಳಿತಾಧಿಕಾರಿ ಬಸವರಾಜ ಜಿ. ಮುಗುಟಾಪುರೆ ಸ್ವಾಗತಿಸಿದರು. ಶ್ರುತಿ ತಲಾರಿ ವಂದಿಸಿದರು.