ಬೀದರ್: ನಗರದ ಶರಣ ಉದ್ಯಾನ ಹಾಗೂ ಬಸವಗಿರಿಯಲ್ಲಿ ತಮ್ಮ ಅನುದಾನದಲ್ಲಿ ಅಳವಡಿಸಿದ ಹೈಮಾಸ್ಟ್ ಬಲ್ಬ್‍ಗಳನ್ನು ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಶಂಕರೆಪ್ಪ ಹಂಗರಗಿ ಉದ್ಘಾಟಿಸಿದರು.
ಸಾರ್ವಜನಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಬಲ್ಬ್‍ಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಡಾ. ಗಂಗಾಂಬಿಕೆ ಅಕ್ಕ, ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ, ಉಷಾ ಮಿರ್ಚೆ, ಜಗದೇವಿ ಮದಕಟ್ಟಿ, ಜ್ಞಾನದೇವಿ ಬಕ್ಕಚೌಡಿ, ಸುವರ್ಣಾ ಚಿಮಕೋಡೆ, ಸುಮಾ ಭೂಶೆಟ್ಟಿ, ಭಾರತಿ ಪಾಟೀಲ, ವಿದ್ಯಾವತಿ ಉಂಡೆ, ನಿರ್ಮಲಾ ಮಸೂದಿ, ವಿಜಯಲಕ್ಷ್ಮಿ ಮಸೂದೆ, ಶಾಂತಾ ಖಂಡ್ರೆ, ನಿರ್ಮಲಾ ಕಲ್ಯಾಣಿ ಮೊದಲಾದವರು ಇದ್ದರು.