ಜಿಲ್ಲೆ

14 ರಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಧಮ್ಮ ಪ್ರವಚನ ಕಾರ್ಯಕ್ರಮದ ಪ್ರಯುಕ್ತ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ನಗರದ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ಫೆ. 14 ರಂದು ಮಧ್ಯಾಹ್ನ 1ಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ‘ಶಿಕ್ಷಣ ಪ್ರೇಮಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್' ಕುರಿತು ಪ್ರಬಂಧ ಸ್ಪರ್ಧೆ, ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾರ್ಥಿಗಳ ದಾರಿದೀಪ’ ಕುರಿತು ಭಾಷಣ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ‘ಪ್ರಜಾಪ್ರಭುತ್ವ ಮತ್ತು ಸಂವಿಧಾನ’ ಕುರಿತು ಪ್ರಬಂಧ ಸ್ಪರ್ಧೆ, ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟದ ಬದುಕು’ ಕುರಿತು ಭಾಷಣ ಸ್ಪರ್ಧೆ, ಎಲ್ಲರಿಗಾಗಿ ಬುದ್ಧ, ಭೀಮರ ಗೀತೆಗಳ ಗಾಯನ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸ ಬಯಸುವವರು ಫೆ. 13 ರ ಸಂಜೆ 5 ರ ಒಳಗೆ ಬಸವರಾಜ ಮಯೂರ (ಮೊ: 9845165429), ಪಾಂಡುರಂಗ ಬೆಲ್ದಾರ್ (9449411557) ಅಥವಾ ಶಂಕರರಾವ್ ಕೊಂಡೆ (9342998534) ಅವರ ಬಳಿ ಹೆಸರು ನೋಂದಾಯಿಸಬಹುದು ಎಂದು ಮಹಾಸಭಾ ಬೀದರ್ ಘಟಕದ ಪ್ರಕಟಣೆ ತಿಳಿಸಿದೆ.