ಜಿಲ್ಲೆ

ಉಜ್ವಲ ಭವಿಷ್ಯಕ್ಕೆ ಕೌಶಲ ಬೆಳೆಸಿಕೊಳ್ಳಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಉಜ್ವಲ ಭವಿಷ್ಯಕ್ಕೆ ಯುವ ಜನರು ಜ್ಞಾನದ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಗುರುನಾನಕ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ಶಾಮಲಾ ದತ್ತಾ ಹೇಳಿದರು.

ನಗರದ ಸಂಸ್ಕøತಿ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 50ನೇ ತಂಡದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೌಶಲಕ್ಕೆ ಈಗ ಬಹು ಬೇಡಿಕೆ ಇದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಯೋಜನೆಗಳು ಇವೆ. ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆಯಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಹೇಳಿದರು.

ಕೇಂದ್ರದಿಂದ ಈವರೆಗೆ 1,500 ಮಂದಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ಶರಣು ಕೋಟೆ ತಿಳಿಸಿದರು.

ವಿ ಆರ್ ವಂಡರ್ಸ್ ಶಾಲೆಯ ನಿರ್ದೇಶಕಿ ಅಶ್ವಿನಿ, ತರಬೇತುದಾರರಾದ ವಾಣಿ, ಜಾನ್ಸನ್, ರೀಟಾ, ಮಲ್ಲಿಕಾರ್ಜುನ, ನಾಗೇಶ, ಸಂತೋಷ್ ರೆಡ್ಡಿ ಮತ್ತಿತರರು ಇದ್ದರು.