ಜಿಲ್ಲೆ

ರಮಾಬಾಯಿ ಜಯಂತ್ಯುತ್ಸವ, ಕೃತಿ ಬಿಡುಗಡೆ 7 ರಂದು

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಅಂಬೇಡ್ಕರ್ ವೃತ್ತದಲ್ಲಿ ಫೆ. 7 ರಂದು ಸಂಜೆ 4ಕ್ಕೆ ರಮಾಬಾಯಿ ಅಂಬೇಡ್ಕರ್ ಜಯಂತ್ಯುತ್ಸವ, ಕೃತಿ ಬಿಡುಗಡೆ, ಆದರ್ಶ ದಂಪತಿ ಹಾಗೂ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮೈಸೂರಿನ ಉರಿಲಿಂಗ ಪೆದ್ದಿಮಠದ ಡಾ. ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸುವರು. ಆಣದೂರಿನ ಭಿಕ್ಕುಣಿ ಅರ್ಚಸ್ಮಿತಾ ಸಾನಿಧ್ಯ, ಕವಿತಾ ಶಿವಶರಣಪ್ಪ ಹುಗ್ಗಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ, ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ಪೂಜಾರಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಧರ್ಮ ಪ್ರಚಾರಕಿ ಲಕ್ಷ್ಮಿ ಬಕ್ಕಪ್ಪ ಹೊಸಮನಿ ಮುಖ್ಯ ಅತಿಥಿಯಾಗಿ, ಸಹ ಶಿಕ್ಷಕಿ ಮಹಾದೇವಿ ಪ್ರೇಮಸಾಗರ್ ದಾಂಡೇಕರ್, ವಿದ್ಯಾನಿನಿಕೇತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗವೇಣಿ ಶಂಕರರಾವ್, ಮಖ್ಯಶಿಕ್ಷಕಿ ಶೋಭಾವತಿ ಜಂಜಿರೆ, ಎಸ್.ಎಸ್.ಡಿ. ಮೇಜರ್ ಜನರಲ್ ಮಂಜುಳಾ ಭಾವಿದೊಡ್ಡಿ ಅತಿಥಿಗಳಾಗಿ ಭಾಗವಹಿಸುವರು.

ಅಶೋಕ ಆಲೂರಕರ್ ಪ್ರ್ರಾಸ್ತಾವಿಕವಾಗಿ ಮಾತನಾಡುವರು. ಸಂಘಪ್ರಿಯಾ ಡಿ. ಜ್ಯೋತಿ ಧಮ್ಮ ವಂದನೆ ಮಾಡುವರು. ಲೇಖಕ ದೀನೆ ವೀರಶೆಟ್ಟಿ ರಚಿತ ಡಾ. ಬಾಬಾ ಸಾಹೇಬ ಅಂಬೇಡ್ಕರ್‍ರವರನ್ನು ನೆನೆಯುವ ಆ ದಿನಗಳು ಕೃತಿ ಬಿಡುಗಡೆ ಮಾಡಲಾಗುವುದು.

ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನೃತ್ಯ ಪ್ರದರ್ಶಿಸುವರು. ಬೆಂಗಳೂರಿನ ಜಂಪೆ ಬಾಲು ತಂಡದವರು ಸಂಗೀತ, ನಾಟ್ಯಶ್ರೀ ನೃತ್ಯಾಲಯದ ಮಕ್ಕಳು ನೃತ್ಯ ಕಾರ್ಯಕ್ರಮ ನಡೆಸಿಕೊಡುವರು. ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.