ಬೀದರ್: ನೆಹರೂ ಯುವ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಫೆ. 5 ಮತ್ತು 6 ರಂದು ತಾಲ್ಲೂಕುಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ಯುವಕರ ವಿಭಾಗದಲ್ಲಿ ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ವೇಟ್ ಲಿಫ್ಟಿಂಗ್, ಯುವತಿಯರ ವಿಭಾಗದಲ್ಲಿ 100 ಮೀ. ಓಟ, ಸ್ಲೋ ಸೈಕ್ಲಿಂಗ್, ಕೊಕ್ಕೋ ಸ್ಪರ್ಧೆಗಳು ನಡೆಯಲಿವೆ.
ಆಸಕ್ತ ಕ್ರೀಡಾಪಟುಗಳು ಕ್ರೀಡಾಕೂಟದ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 8217014315 ಅಥವಾ 8861420116 ಗೆ ಸಂಪರ್ಕಿಸಬಹುದು ಎಂದು ಬೀದರ್ ಮೈನಾರಿಟಿ ಸ್ಲೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ ತಿಳಿಸಿದ್ದಾರೆ.