ಬೀದರ್: ನೆಹರೂ ಯುವ ಕೇಂದ್ರ, ಭಗತ್‍ಸಿಂಗ್ ಯುವಕ ಸಂಘ ಹಾಗೂ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆ ವತಿಯಿಂದ ಹುಲಸೂರಿನಲ್ಲಿ ಈಚೆಗೆ ನಡೆದ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ಕೊಕ್ಕೋದಲ್ಲಿ ಗುರುಬಸವೇಶ್ವರ ಪ್ರೌಢಶಾಲೆ ಬಾಲಕಿಯರ ತಂಡ, ವಾಲಿಬಾಲ್‍ನಲ್ಲಿ ಶ್ರೀ ಸಾಯಿ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆಯಾದವು.
ಶಟಲ್ ಬ್ಯಾಡ್ಮಿಂಟನ್‍ನಲ್ಲಿ ವಿದ್ಯಾಜ್ಯೋತಿ ಶಾಲೆಯ ಅನಿಶ್ ಪ್ರಥಮ, ನಂದನ್ ದ್ವಿತೀಯ, ವೈಭವ್ ತೃತೀಯ, ಬಾಲಕಿಯರ ವಿಭಾಗದ 100 ಮೀಟರ್ ಓಟದಲ್ಲಿ ತನ್ವಿ ಪ್ರಥಮ, ಮಹಾದೇವಿ ದ್ವಿತೀಯ, ಶಾರದಾ ತೃತೀಯ, ಸ್ಲೋ ಸೈಕ್ಲಿಂಗ್‍ನಲ್ಲಿ ಅಕ್ಷರಾಣಿ ಪ್ರಥಮ, ಶುಭಾಂಗಿ ದ್ವಿತೀಯ, ಜ್ಯೋತಿ ತೃತೀಯ, ಬಾಲಕರ ವಿಭಾಗದ ವೇಟ್ ಲಿಫ್ಟಿಂಗ್‍ನಲ್ಲಿ ಸಲ್ಮಾನ್ ಪ್ರಥಮ, ಸಂದೇಶ್ ದ್ವಿತೀಯ ಸ್ಥಾನ ಗಳಿಸಿದರು.
ವಿಜೇತರಿಗೆ ಕ್ರೀಡಾ ಸಾಮಗ್ರಿ ಕಿಟ್ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ತಹಶೀಲ್ದಾರ್ ಶಿವಾನಂದ ಮೇತ್ರೆ ಉದ್ಘಾಟಿಸಿದರು. ಸಾರಿಗೆ ಇಲಾಖೆಯ ಜಿ.ಕೆ. ಬಿರಾದಾರ, ಪರಮಾನಂದ ಸಜ್ಜನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ್, ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಫಯಾಸ್ ಪಟೇಲ್, ಪ್ರಾಚಾರ್ಯೆ ಸಬಿಯಾ ಪಟೇಲ್, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಸೋಮನಾಥ ಪೂಜಾರಿ ಮತ್ತಿತರರು ಇದ್ದರು.