ಬೀದರ್: ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ನೇತೃತ್ವದಲ್ಲಿ ನಡೆಯಲಿರುವ 23ನೇ ವಚನ ವಿಜಯೋತ್ಸವ ನಿಮಿತ್ತ ಬಸವ ಕಾಯಕ ದಾಸೋಹ (ಬಿಕೆಡಿ) ಫೌಂಡೇಷನ್ ವತಿಯಿಂದ ನಗರದ ಐಎಂಎ ಹಾಲ್ನಲ್ಲಿ ಫೆ.7ರಿಂದ 9 ರವರೆಗೆ ವಿದ್ಯುತ್ ಸ್ವಿಚ್ ಗೇರ್ ಮತ್ತು ಅದರ ಅನ್ವಯಗಳು ಕುರಿತ ಉಚಿತ ಕೌಶಲ ಅಭಿವೃದ್ಧಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.
ಶಿವಾನಂದ ಡಿ.ವಿ. ಮಾರ್ಗದರ್ಶನ ಮಾಡಲಿದ್ದಾರೆ. ಎಸ್ಎಸ್ಎಲ್ಸಿ ಉತ್ತೀರ್ಣ, ಅನುತ್ತೀರ್ಣ, ಐಟಿಐ ಎಲೆಕ್ಟ್ರಿಕಲ್, ಡಿಪ್ಲೊಮಾ ಎಲೆಕ್ಟ್ರಿಕಲ್, ಇಂಜಿನಿಯರಿಂಗ್ ಎಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಮೂರೂ ದಿನ ಬೆಳಗ್ಗೆ 9.30ರಿಂದ ಸಂಜೆ 5 ರವರೆಗೆ ಕಾರ್ಯಾಗಾರ ಜರುಗಲಿದೆ. ಹೆಸರು ನೋಂದಾಯಿಸಿದ 60 ವಿದ್ಯಾರ್ಥಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಇದೆ. ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 9036811486 ಅಥವಾ 9740998983 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.