ಜಿಲ್ಲೆ

58 ಜನರಿಂದ ಸ್ವಯಂ ಪ್ರೇರಿತ ರಕ್ತದಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಸುವರ್ಣ ಮಹೋತ್ಸವ ಹಾಗೂ ಸಂಘದ ಅಧ್ಯಕ್ಷ ಜಗನ್ನಾಥ ಸಿಂಧೆ ಅವರ 75ನೇ ಜನ್ಮದಿನದ ಪ್ರಯುಕ್ತ ಇಲ್ಲಿಯ ಫಾರ್ಮಾ ಭವನದಲ್ಲಿ ನಡೆದ ಶಿಬಿರದಲ್ಲಿ 58 ಜನ ರಕ್ತದಾನ ಮಾಡಿದರು.

ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಬೀದರ್ ವಿಭಾಗ 1 ಮತ್ತು 2 ರ ಔಷಧ ನಿಯಂತ್ರಣಾಧಿಕಾರಿಗಳಾದ ಧನಂಜಯ್ ಹತಪಾಕಿ ಹಾಗೂ ಎಚ್.ಎಂ. ರೇಣುಕಸ್ವಾಮಿ ಅವರು ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವರಾಜ ಪಾಟೀಲ, ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ನಿರ್ದೇಶಕ ಬಸವರಾಜ ಪಾಟೀಲ ಹಾರೂರಗೇರಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ವಿಜಯಕುಮಾರ ಬಿರಾದಾರ, ಸೂರ್ಯಕಾಂತ ಆಗ್ರೆ, ಬಸವರಾಜ ಭೂಶೆಟ್ಟಿ, ಕಿರಣ ಉಪ್ಪೆ, ರಾಜಕುಮಾರ ನವಾಡೆ, ಮಹಮ್ಮದ್ ಇಲಿಯಾಸ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಖಾಲೀದ್ ಷರೀಫ್, ಖಜಾಂಚಿ ಸಂಜು ನೂಕಲವಾರ್, ಸಹ ಕಾರ್ಯದರ್ಶಿ ಮಹಾದಪ್ಪ ಶಿರಶೆಟ್ಟೆ, ಸುರೇಶ ಬಿರಾದಾರ, ಮಹಮ್ಮದ್ ಎತೆಶಾಮ್‍ಉಲ್ ಹಕ್, ಮಹಮ್ಮದ್ ತಾಹಾ, ನವನಾಥ ಬಿರಾದಾರ ಚಿಲ್ಲರ್ಗಿ, ಮಾಣಿಕ ಕರಂಜೆ, ಎಂ.ಎಂ. ಬೇಗಂ, ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ವೀರೇಂದ್ರ ಪಾಟೀಲ ಮತ್ತಿತರರು ಇದ್ದರು.