ಜಿಲ್ಲೆ

ಹಲಬರ್ಗಾ ಪಿಕೆಪಿಎಸ್‍ಗೆ ಗೋವಿಂದಸಿಂಗ್ ಅಧ್ಯಕ್ಷ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗೋವಿಂದಸಿಂಗ್ ಶಿವಪಾಲ್‍ಸಿಂಗ್ ಠಾಕೂರ್ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ನರಸಗೊಂಡ ಕುಪ್ಪೆ ಆಯ್ಕೆಯಾದರು.

ಸಂಘದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಆಯ್ಕೆ ಅವಿರೋಧವಾಗಿ ನಡೆಯಿತು. ಚುನಾವಣಾಧಿಕಾರಿ ನಾಗನಾಥ ಗನ್ನಾಳೆ ಆಯ್ಕೆಯನ್ನು ಪ್ರಕಟಿಸಿದರು.

ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಗುಲಾಲು ಎರಚಿ, ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಸಂಘದ ನಿರ್ದೇಶಕರಾದ ಸಂಗ್ರಾಮ ಪಾಟೀಲ ಅಹಮದಾಬಾದ್, ಸೋಮನಾಥ ಬಿರಾದಾರ, ಬ್ರಿಜ್‍ಪಾಲ್‍ಸಿಂಗ್ ಠಾಕೂರ್, ಬಸವರಾಜ ಮೂಲಗೆ, ಸಂತೋಷ್ ಪಾಟೀಲ ತೇಗಂಪುರ, ಜ್ಯೋತಿ ಕಲ್ಯಾಣರಾವ್, ಜಗದೀಶ್ ಕೆಪ್ಟೆ, ಮೋಹನ್ ಅಲಿಯಾಬಾದ್, ಚಂದು ಕೋಸಂ, ಕಾರ್ಯದರ್ಶಿ ಶಿವಕುಮಾರ ವಡ್ಡಿ, ಗ್ರಾ.ಪಂ. ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲ್‍ಸಿಂಗ್ ಠಾಕೂರ್, ಸದಸ್ಯ ಪ್ರಕಾಶ ಪ್ರಭಾ, ಮುಖಂಡರಾದ ರಮೇಶ ಪ್ರಭಾ, ಧನರಾಜ ಪಾಟೀಲ, ಉದಯಕುಮಾರ ಮೂಲಗೆ, ಉಮೇಶ ಕುಲಕರ್ಣಿ, ರಾಜಕುಮಾರ ಚಲುವಾ, ಮಾಣಿಕರಾವ್ ಪಾಟೀಲ ತೇಗಂಪುರ, ಶಾಂತಕುಮಾರ ಬಿರಾದಾರ, ಶಿವಕುಮಾರ ಪಾಟೀಲ ತೇಗಂಪುರ, ಮಲ್ಲಿಕಾರ್ಜುನ ಜಿವಣಗೆ, ಘಾಳೆಪ್ಪ ನಾಗೂರೆ, ರಾಜು ಕುಂಬಾರ, ಸತೀಶ್ ಮಡಿವಾಳ ಮತ್ತಿತರರು ಇದ್ದರು.