ಬೀದರ್: ರಡ್ಡಿ ಸಮಾಜ ಶಾಂತಿ, ಸಹಬಾಳ್ವೆ ಸಂಕೇತವಾಗಿದೆ. ಈ ಸಮಾಜದವರು ಸರ್ವ ಜನಾಂಗದವರೊಂದಿಗೆ ಪ್ರೀತಿ, ವಾತ್ಸಲ್ಯದಿಂದ ಒಳಗೊಳ್ಳುವ ಪರಿಪಾಠ ಹೊಂದಿದ್ದಾರೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ನಗರದ ಹೇಮ-ವೇಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಕಳೆದ ವರ್ಷ ಘೋಷಿಸಿದ 10 ಲಕ್ಷ ರೂ. ಅನುದಾನ ಎರಡು ವಾರದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಶಿಕ್ಷಕ ವೀರಂತರಡ್ಡಿ ಜಂಪಾ ಉಪನ್ಯಾಸ ನೀಡಿ, ವೇಮನರು ಪದ್ಯ ಹಾಗೂ ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿದ್ದಾರೆ. ಆಂಧ್ರಪ್ರದೇಶದ ಕೆಲ ಸಾಹಿತಿಗಳು ಉದ್ದೇಶಪೂರ್ವಕವಾಗಿ ಇವರ ಇತಿಹಾಸ ಮುಚ್ಚಿಟ್ಟಿದ್ದರು. ನಂತರ ದಿನಗಳಲ್ಲಿ ಸಿ.ಪಿ. ಬ್ರೋನ್ ಅವರ ವೇಮನರ ಸಾಹಿತ್ಯವನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದರಿಂದ ನಮಗೆ ಇತಿಹಾಸ ತಿಳಿಯಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ವೇಮನರ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಾದ ಅಗತ್ಯವಿದೆ ಎಂದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಪಂ ಯೋಜನಾ ನಿದರ್ೇಶಕ ಜಗನ್ನಾಥ ಮೂತರ್ಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಎನ್.ಬಿ.ರಡ್ಡಿ ಗುರೂಜಿ, ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಶಂಕರರಡ್ಡಿ ಚಿಟ್ಟಾ, ಕಾರ್ಯದರ್ಶಿ ಗೋಪಾಲರಡ್ಡಿ, ಉಪಾಧ್ಯಕ್ಷ ರಾಜರಡ್ಡಿ, ಪ್ರಮುಖರಾದ ರಾಜು ಚಿಂತಾಮಣಿ, ಸಂಗ್ರಾಮರಡ್ಡಿ, ಶ್ರೀನಿವಾಸರಡ್ಡಿ, ಓಂರಡ್ಡಿ ಇತರರಿದ್ದರು.
ದೇವಸ್ಥಾನದ ಭೂಮಿ ಖರೀದಿಗಾಗಿ ಸಂಜುರಡ್ಡಿ ಜಂಪಾ 10 ಲಕ್ಷ ರೂ. ದೇಣಿಗೆ ನೀಡಿದರು. ಪಿಕೆಪಿಎಸ್ ಹಾಗೂ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಹಾಗೂ ಸರ್ಕಾರಿ ಉದ್ಯೋಗದಿಂದ ನಿವೃತ್ತಿ, ಪದೋನ್ನತಿ ಹೊಂದಿದ ಸಮಾಜದವರನ್ನು ಸನ್ಮಾನಿಸಲಾಯಿತು.