ಬೀದರ: ತಾಲೂಕಿನ ಚಿಮಕೋಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷ ಆಡಳಿತ ಮಂಡಳಿ ಚುನಾವಣೆ ಜರುಗಿತ್ತು. ಚುನಾವಣೆಯಲ್ಲಿ ಅಧ್ಯಕ್ಷ ಬಾಬುರಾವ್ ಕಂದಗೂಳೆ ವಿಜಯಶಾಲಿ ಆಗಿದ್ದಾರೆ . ಉಪಾಧ್ಯಕ್ಷರಾಗಿ ವಿಜಯಕುಮಾರ್ ಅಪ್ಪರಾವ ಚಿಮಕೋಡ ವಿಜಯಶಾಲಿ ಆಗಿದ್ದಾರೆ.
ಅಧ್ಯಕ್ಷ ಕಂದಗೂಳೆ ಸನ್ಮಾನ ಸ್ವಿಕರಿಸಿ ಹೊಸದಾಗಿ ಆಯ್ಕೆಯಾದ ನಿರ್ದೇಶಕರನ್ನು ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಸಂಪೂರ್ಣ ರೈತರ ಅಭಿವೃದ್ದಿಗಾಗಿ ಸಂಘದ ಏಳಿಗೆಗಾಗಿ ಹಗಲಿರುಳು ದುಡಿಯುವುದಾಗಿ ಹೇಳಿದರು. ಹೊಸದಾಗಿ ಚುನಾಯಿತರಾದ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಿ ಸಿಹಿ ಹಂಚಿ ಗೌರವಿಸಲಾಯಿತು. ಗ್ರಾಮದ ರೈತರು ಹಿರಿಯರು ಉಪಸ್ಥಿತರಿದ್ದರು.