ಬೀದರ: ಉನ್ನತ ಪದವಿ, ಹುದ್ದೆ ಪಡೆದವರು ಶ್ರೇಷ್ಠರು ಎನ್ನುವ ಭಾವನೆ ನಮ್ಮೇಲ್ಲರ ಮನಸಿನಲ್ಲಿ ಅಡಗಿದೆ ಈ ಭಾವನೆ ಬದಲಾಗಬೇಕು ಹಣದಾಸೆಗೆ ಜೋತು ಬೀಳದೆ ನಮ್ಮ ನೆಲ ಮೂಲದ ಕಲೆ, ಸಂಸ್ಕçತಿ ಉಳಿಸಿ ಬೆಳೆಸಲು ತಮ್ಮ ಸರ್ವವಸ್ವವನ್ನು ತ್ಯಾಗಮಾಡಿ ಕಲೆಯನ್ನು ಉಳಿಸುತ್ತಿರುವ ಕಲಾವಿದರು ಶ್ರೇಷ್ಠರು ಎನ್ನುವ ಆಲೋಚನೆ ಬರಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಬಸವರಾಜ ಧನ್ನೂರ ಹೇಳಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದರ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ತತ್ವಪದಕಾರರ ಸಮಾವೇಶ ಭಜನಾ ಸ್ಪರ್ಧೆ ಹಾಗೂ ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸ್ತಿ ಪ್ರದಾನ ಮತ್ತು ರಾಜೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಜನಾ ಸ್ಪರ್ಧೆಯಲ್ಲಿ ವಿಜೇತರಾದ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಇತ್ತಿಚೀಗೆ ತಂತ್ರಜ್ಞಾನ ಹೆಚ್ಚಳದಿಂದ ನಮ್ಮ ಮೂಲದ ಜೋಗುಳ ಪದ, ಸುಗ್ಗಿ ಪದ, ಸೋಬಾನೆ ಪದ ಸೇರಿದಂತೆ ವಿವಿಧ ಗೀತಗಾಯನ ಕಲೆಗಳು ನಶಿಸುತ್ತಿವೆ. ನಮ್ಮ ಕಲೆ ಕಲಾವಿದರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿನ್ನೇಲೆಯಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಕಲಾವಿದರಿಗೆ ನ್ಯಾಯ, ಸ್ಥಾನಮಾನ, ಗೌರವ ನೀಡುವ ಜೋತೆಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿದೆ. ಇವರು ಸುಮಾರು 11 ಸಾವಿರ ಕಲಾವಿದರನ್ನು ಗುರುತಿಸಿ ನೋಂದಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂಘ-ಸAಸ್ಥೆಗಳು ಹಾಗೂ ಜನಸಾಮಾನ್ಯರಿಂದ ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಲಿ ಎಂದರು.ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಬೆಂಗಳೂರಿನಲ್ಲಿ ನಕಲಿ ಕಲಾವಿದರ ಹಾಗೂ ಮಾಶಾಸನ ಕೋಡಿಸುವುದಾಗಿ ಕಲಾವಿದರಿಗೆ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಲಾವಿದರು ಇವರಿಂದ ಎಚ್ಚರಿದ್ದರಬೇಕು. ಸರ್ಕಾರ ಇದರತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಸಬ್ಬಂದಿತ ಇಲಾಖೆ ವಿರುದ್ದ ಹೋರಾಟ ಕೈಗೊಳ್ಳಲಾಗುವುದು. ಕಲಾವಿದರ ಕ್ಷೇತ್ರದಿಂದಲು ವಿಧಾನ ಪರಿಷತ್ ಸದಸ್ಯರು ಆಯ್ಕೆಯಾಗಬೇಕು. ಸರ್ಕಾರ ಪ್ರಯೋಜಿತ ಕಾರ್ಯಕ್ರಮಗಳಿದ್ದಾಗ ಕಲಾವಿದರು ತಮ್ಮ ನಿಡುವ ಸಂಭಾವನೆ ಬಗ್ಗೆ ಮಾಹಿತಿ ಪಡೆಯಬೇಕು. ಈ ಕಾರ್ಯಕ್ರಮ ಆಯೋಜನೆಯ ಮುಖ್ಯ ಉದ್ದೇಶ ನಮ್ಮ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜೋತೆಗೆ ಅವರನ್ನು ಒಗ್ಗೂಡಿಸುವುದಾಗಿದೆ ಎಂದರು.
ಕರ್ನಾಟಕ ಗೊಂಡ ಆದಿವಾಸಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ಮಾತನಾಡಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಕಲಾವಿದರನ್ನು ಒಗ್ಗೂಡಿಸಿ ಅವರ ಸಮಸ್ಯೆಯನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದೆ. ಇವರಿಂದ ಇನ್ನು ಹೆಚ್ಚಿನ ಕೆಲಸ ಆಗಬೇಕಾದರೆ ಇವರಿಗೆ ಅಧಿಕಾರ ಸೀಗಬೇಕು ಅಂದಾಗ ಇನ್ನು ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸರ್ಕಾರ ಕಲಾವಿದರಿಗೆ ವಿಧಿಸಿದ ಮಾಶಾಸನ ವಯಸನ್ನು 58 ರಿಂದ 50 ಸೇವಾ ಅವಧಿಯನ್ನು 25 ರಿಂದ 20 ವರ್ಷಕ್ಕೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು.
ವಿಜೇತರಿಗೆ ಬಹುಮಾನ ವಿತರಣೆ: ಸಮಾರಂಭದಲ್ಲಿ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಗುರುಲಿಂಗೇಶ್ವ ಭಜನಾ ತಂಡ ಬಳ್ಳಾರಿ, ದೇವನಾಪ್ರೀಯ ಅಶೋಕ ಭಜನಾ ತಂಡ ರಾಯಚೂರು, ವೀಣಾಪಾಣಿ ಭಜನಾ ತಂಡ ಭಂಗೋರ ಬೀದರ, ಸಪ್ತಸ್ವರ ಭಜನಾ ತಂಡ ಔರಾದ, ದ್ವೀತಿಯ ಬಹುಮಾನ ಪಡೆದ ಮಲ್ಲಿಕಾರ್ಜುನ ಭಜನಾ ತಂಡ ಬೆಳಕುಣಿ, ಏಕಲವ್ಯ ಭಜನಾ ತಂಡ ತಡಕಲ್ ರಾಯಚೂರು, ಸಿದ್ದಾರೋಡ ಭಜನಾ ಮಂಡಳಿ ಬಳ್ಳಾರಿ ಹಾಗೂ ತೃತೀಯ ಬಹುಮಾನ ರೇವಣಸಿದ್ದೇಶ್ವರ ತಂಡ ಗುಂಪಾ, ಸ್ಯಾಮವೇಲ್ ತಂಡ ಇಮಾಮಪುರ, ಬೀರಲಿಂಗೇಶ್ವರ ಭಜನಾ ಮಂಡಳಿ, ನಾಗರಾಳ ಭಾಲ್ಕಿಗೆ ಬಹುಮಾನ ವಿತರಣೆ ಮಾಡಲಾಯಿರು. ಪ್ರಥಮ ಬಹುಮಾನ 50 ಸಾವಿರ, ದ್ವಿತೀಯ 25 ಸಾವಿರ ಹಾಗೂ ತೃತಿಯ ಬಹುಮಾನ 15 ಸಾವಿರ ರೂಪಾಯಿ ಹಾಗೂ ಪ್ರಮಾಣ ಪತ್ರ ಒಳಗೊಂಡಿತ್ತು.
ಕಲ್ಯಾಣ ಕಾರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳಿ, ಕ.ರಾ.ದ.ಸಂ. ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಭೌದ್ದೆ, ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ, ನಿಜಶರಣ ಅಂಬಿಗರ ಚೌಡಯ್ಯ ಯುವಸೇನೆ ಅಧ್ಯಕ್ಷ ಸುನಿಲ್ ಭಾವಿಕಟ್ಟಿ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಹರಿಕೃಷ್ಣ, ಕೋಶಾಧ್ಯಕ್ಷ ನಾಗಯ್ಯ ಸ್ವಾಮಿ, ಸಹ ಕಾರ್ಯದರ್ಶಿ ಅಮರೇಶ ವೇಷಗಾರ, ಸದಸ್ಯರಾದ ಲಲಿತಾ ಪವಾರ, ಸುನಿಲ ಕಡ್ಡೆ, ನಾರಾಯಣಪ್ಪ, ಮಾಡಸಿರವಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.