ಬೀದರ್: ಪಾರು ಪಾರ್ವತಿ ಹ್ಯಾಸ್ ಟ್ಯಾಗ್ ಚಿತ್ರ ತಂಡವು ನಗರದ ಅಂಬೇಡ್ಕರ ವೃತ್ತದ ಬಳಿ ಪ್ರೋಮೋ ಬಿಡುಗಡೆ ಮಾಡಿತು. ಪ್ರಖ್ಯಾತ ಯುಟ್ಯೂಬರ್ ಶ್ರೀಕಾಂತ ಅವರು ಸಿನೆಮಾದಲ್ಲಿ ಬಳಸಿದ ಕಾರನ್ನು ಟ್ರಾವೆಲ್ ಮಾಡಿಕೊಂಡು ಕರ್ನಾಟಕದಾದ್ಯಂತ ಸಂಚರಿಸುತ್ತಿದ್ದಾರೆ.
ರೋಹಿತ್ ಕೀರ್ತಿಯವರು ನಿರ್ದೇಶಿಸಿದ ಈ ಸಿನೆಮಾದ ಪ್ರಮುಖ ಪಾತ್ರದಲ್ಲಿ ದೀಪಿಕಾ ದಾಸ್, ಪೂನಂ ಸಿರ್ ನಾಯಕ್ ಹಾಗೂ ಫವಾಜ್ ಅಶ್ರಫ ಅವರು ನಟಿಸಿದ್ದಾರೆ. ಈ ಮೂವರೊಂದಿಗೆ ಅತ್ಯಂತ ಪ್ರಮುಖವಾದ ಇನ್ನೊಂದು ಪಾತ್ರವೆಂದರೆ ಇವತ್ತು ಬೀದರಿಗೆ ಬಂದ ಈ ಕಾರು. ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಈ ಚಿತ್ರವು ಇದೇ ತಿಂಗಳ 31 ರಂದು ಕರ್ನಾಟಕದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಹೀಗಾಗಿ ಯ್ಯೂಟೂಬರ್ ಶ್ರಿಕಾಂತ ಅವರು ಬೀದರಿನ ಸಮಸ್ತ ಜನತೆಯು ಈ ಚಿತ್ರವನ್ನು ನೋಡುವುದರ ಮೂಲಕ ಕನ್ನಡ ಚಿತ್ರರಂಗ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿಕೊಂಡರು.
ಚಿತ್ರದ ಪ್ರೋಮೋವನ್ನು ಬಿಡುಗಡೆ ಮಾಡಿದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ಅವರು, ಮಕರ ಸಂಕ್ರಾತಿ ದಿನದಂದು ಆಗಮಿಸಿದ ಸಿನಿಮಾ ತಂಡಕ್ಕೆ ಜಾನಪದ ದೇಸಿ ಶೈಲಿಯ ಸಿಹಿ ಸಂಕೆತವಾಗಿ, ಎಳ್ಳು-ಬೆಲ್ಲ, ಕಡಲೆ-ಕಬ್ಬು ನೀಡಿ ಶುಭ ಹಾರೈಸಿ ಮಾತನಾಡಿ, ಬೀದರಿನ ಸಮಸ್ತ ಕನ್ನಡ ಮನಸುಗಳು ಉತ್ತಮ ಕಂಟೆAಟ್ ಇರುವ ಈ ಚಿತ್ರವನ್ನು ನೋಡುವುದರ ಮೂಲಕ ಚಿತ್ರ ತಂಡ ಬೆಳೆಯುವಂತೆ ಮಾಡಬೆಕು ಎಂದರು.
ಮತ್ತು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹೋಗಿ ಪ್ರಚಾರಗೈಯುತ್ತಿರುವ ಯ್ಯೂಟ್ಯೂಬರ್ ಶ್ರೀಕಾಂತ ಮತ್ತು ಶ್ಯಾಮ್ ಅವರಿಗೆ ನಮ್ಮ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪರವಾಗಿ ಶುಭ ಕೋರುತೇನೆ. ಯುವಕರಿಗಾಗಿ ಹೇಳಿ ಮಾಡಿಸಿದ ಈ ಚಿತ್ರವನ್ನು ಚಿತ್ರ ಮಂದಿರಕ್ಕೆ ಹೋಗಿ ಕುಟುಂಬದೊAದಿಗೆ ನೋಡಿರಿ ಎಂದು ಮನವಿ ಮಾಡಿಕೊಂಡರು.
ಕಥೆಗಾರ್ತಿ ಬಿ.ಜೆ ಪಾರ್ವತಿ ಸೋನಾರೆ, ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಮಾರುತಿ ಎಣಕೂರೆ, ಗಜ ಸೂರ್ಯ, ಸಂತೋಷ ಎಣಕೂರೆ ಮುಂತಾದವರಿದ್ದರು.