ಬೀದರ್: ಅಬಾಕಸ್ ಕಲಿಕೆಯಿಂದ ಮಕ್ಕಳ ಬುದ್ಧಿಮಟ್ಟ ಹೆಚ್ಚಾಗುವುದರ ಜತೆಗೆ ಮತ್ತು ಗಣಿತ ವಿಷಯದಲ್ಲಿ ಚುರುಕಾಗುತ್ತಾರೆ ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಬಿಸಿಸಿಐ) ಅಧ್ಯಕ್ಷ ಬಿ.ಜಿ. ಶೆಟಕಾರ ಹೇಳಿದರು.
ಜೀನಿಯಸ್ ಶಿಕ್ಷಣ ಟ್ರಸ್ಟ್ ನಿಂದ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಅಬಾಕಸ್ ಜಿಲ್ಲಾ ಮಟ್ಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಪ್ರತಿಭೆ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಇತ್ತೀಚಿನ ದಿನಗಳಲ್ಲಿ ಅಬಾಕಸ್ ಮೂಲಕ ಕಲಿಕೆ ಸಾಮಥ್ರ್ಯ ಹೆಚ್ಚಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ಗುಂಡಪ್ಪ ಬಿರಾದಾರ್ ಮಾತನಾಡಿ, ಅಬಾಕಸ್ ಮೂಲಕ ಕಲಿತರೆ ಮಿದುಳಿನ ಶಕ್ತಿ ವೃದ್ಧಿಯಾಗಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಉಜ್ವಲ ಭವಿಷ್ಯಕ್ಕೆ ಇಂಥ ಸ್ಪರ್ಧೆಯಲ್ಲಿ ಮಕ್ಕಳನ್ನು ಪಾಲ್ಗೊಳ್ಳಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಚನ್ನಬಸಮ್ಮ ಬಿಸಿಎ ಮತ್ತು ಬಿಕಾಂ ಕಾಲೇಜು ಪ್ರಾಚಾರ್ಯ ಸತೀಶ್ ಪರ್ತಾಪುರ, ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ್, ಅಶ್ವಿನಿ ಕುದರೆ ಪಬ್ಲಿಕ್ ಶಾಲೆ ಅಧ್ಯಕ್ಷ ಶಂಭುಲಿಂಗ ಕುದರೆ, ಪ್ರಮುಖರಾದ ಎಂ.ಎ. ಜಬ್ಬಾರ್, ಡಾ.ಲಕ್ಷ್ಮೀ ವಿ., ಫಾದರ್, ಪ್ರವೀಣ ಕೆ.ಜಿ., ಚಿತ್ರಾ ದೇಶಪಾಂಡೆ, ಜೀನಿಯಸ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಶಿವಲಿಂಗಯ್ಯ ಸ್ವಾಮಿ, ಉಪಾಧ್ಯಕ್ಷೆ ಮುಕ್ತಾಂಜಲಿ ಹಿರೇಮಠ, ಜೀನಿಯಸ್ ಅಬಾಕಸ್ ಸಂಸ್ಥಾಪಕ ಪ್ರವೀಣ ಸ್ವಾಮಿ ಇತರರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಶಾಲೆ 840 ವಿದ್ಯಾರ್ಥಿಗಳ ಪೈಕಿ 250 ಮಕ್ಕಳು ವಿಜೇತರಾದರು.