ಜಿಲ್ಲೆ

ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಚಿನ್ ಪಾಂಚಾಳ ಅವರಿಗೆ ಐವರು ಸೋದರಿಯರಿದ್ದು, ಒಬ್ಬರಿಗಾದರೂ ಸರ್ಕಾರಿ ನೌಕರಿ ನೀಡುವಂತೆ ಮನವಿ ಸಿಎಂಗೆ ಮಾಡುವುದಾಗಿ ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಉನ್ನತಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿನ್ ಸಾವು ಅತ್ಯಂತ ದುಃಖದಾಯಕ. ನನ್ನ ಕ್ಷೇತ್ರದವರಾಗಿದ್ದು, ಈ ಘಟನೆ ಬಳಿಕ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸ್ವತಂತ್ರ ತನಿಖೆ ಭರವಸೆ ನೀಡಿದ್ದೆ. ಈಗ ಪ್ರಕರಣವನ್ನು ಸಕರ್ಾರ ಸಿಒಡಿಗೆ ವಹಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಬಿಜೆಪಿಯವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಚಾರಗಳಿಲ್ಲ. ಹೀಗಾಗಿ ಅಪಪ್ರಚಾರದಲ್ಲಿ ತೊಡಗಿದೆ. ಪ್ರಿಯಾಂಕ್ ಖರ್ಗೆ ವಿರುದ್ಧವೂ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ನಾಯಕರ ಮೇಲೆ ಹಲವು ಭ್ರಷ್ಟಾಚಾರ, ಅಕ್ರಮದ ಆರೋಪಗಳಿದ್ದು, ಈ ಬಗ್ಗೆ ಯಾರೂ ಮಾತನಾಡಲ್ಲ. ಆದರೆ ಖರ್ಗೆ ವಿರುದ್ಧ ಡೆತ್ ನೋಟ್ನಲ್ಲಿ ಯಾವುದೇ ಆರೋಪ ಇಲ್ಲದಿದ್ದರೂ ರಾಜೀನಾಮೆ ಕೇಳುವುದು ಅಸಮಂಜಸ ಎಂದು ಕಿಡಿಕಾರಿದರು.