ಜಿಲ್ಲೆ

ಆಚರಿಸದ ಜಕಣಾಚಾರಿ ಸಂಸ್ಮರಣ ದಿನಾಚರಣೆ: ಖಂಡನೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲೆಯ ಅನೇಕ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನ ಆಚರಿಸದಿರುವುದನ್ನು ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ತೀವ್ರವಾಗಿ ಖಂಡಿಸಿದೆ.

ಸರ್ಕಾರ ಸಂಸ್ಮರಣ ದಿನ ಆಚರಿಸಲು ಆದೇಶ ಹೊರಡಿಸಿದ್ದರೂ, ಬಿಡಿಎ ಕಚೇರಿ, ಶಹಾಪುರ ಸರ್ಕಾರಿ ಶಾಲೆ ಸೇರಿ ವಿವಿಧೆಡೆ ಆಚರಿಸಲಾಗಿಲ್ಲ ಎಂದು ಸಮಿತಿಯ ಅಧ್ಯಕ್ಷ ಮಹೇಶ ಪಾಂಚಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸ್ಮರಣ ದಿನ ಆಚರಿಸದೆ ಸರ್ಕಾರದ ಆದೇಶ ಉಲ್ಲಂಘಿಸಲಾಗಿದೆ. ಜಕಣಾಚಾರಿ ಅವರಿಗೂ ಅಗೌರವ ತೋರಲಾಗಿದೆ. ಜಿಲ್ಲಾಡಳಿತ ಜಯಂತಿ ಆಚರಿಸದ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳ ಮಾಹಿತಿ ಪಡೆದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.