ಜಿಲ್ಲೆ

ಮಾಜಿ ಪ್ರಧಾನಮಂತ್ರಿಗೆ ಭಾವಪೂರ್ಣ ಶ್ರದ್ಧಾಂಜಲಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನವ ಭಾರತ ಎನ್‍ಜಿಒ ವತಿಯಿಂದ ಇಲ್ಲಿಯ ಪಾಪನಾಶ ಗೇಟ್ ಸಮೀಪ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

ನಗರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜಶ್ರೀ ಸ್ವಾಮಿ, ಮುಖಂಡ ಶ್ರೀಕಾಂತ ಸ್ವಾಮಿ, ನವ ಭಾರತ ಎನ್‍ಜಿಒ ಅಧ್ಯಕ್ಷ ಡಾ. ಸಂತೋಷಕುಮಾರ, ಕಾರ್ಯದರ್ಶಿ ಸಂತೋಷ್ ಲದ್ದೆ, ಜಂಟಿ ಕಾರ್ಯದರ್ಶಿ ದಿನೇಶ್ ಪವಾರ್, ಖಜಾಂಚಿ ತಾನಾಜಿ ಸಗರ್ ಮತ್ತಿತರರು ಇದ್ದರು.