ಬೀದರ್: ಕಮಲನಗರ ತಾಲ್ಲೂಕಿನ ಬಳತ(ಕೆ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮುಖಂಡ ದೀಪಕ್ ಪಾಟೀಲ ಚಾಂದೋರಿ ಬೆಂಬಲಿತ ಪೆನಾಲ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಎಲ್ಲ 12 ಸ್ಥಾನಗಳೂ ಪೆನಾಲ್ ಪಾಲಾಗಿವೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕ್ಷೇತ್ರಗಳಿಂದ ಲಕ್ಷ್ಮಣ ಸಿದ್ರಾಮ, ಕಾಳಿದಾಸ ಶಂಕರರಾವ್, ಸಂಜುಕುಮಾರ ವಿಠ್ಠಲರಾವ್, ಶರಣಪ್ಪ ಶಿವರಾಜ ಪಾಟೀಲ, ರಾಮಚಂದ್ರ ಗುಂಡಪ್ಪ, ಮಹಿಳೆಯರಿಗೆ ಮೀಸಲಾಗಿದ್ದ ಕ್ಷೇತ್ರಗಳಿಂದ ಉಜ್ವಲಾ ಧನಾಜಿ ಬಿರಾದಾರ, ಸುನೀತಾ ಕಾಶಿರಾಮ ಕೋಟೆ, ಪ್ರವರ್ಗ ‘ಎ'ಗೆ ಮೀಸಲಾಗಿದ್ದ ಕ್ಷೇತ್ರದಿಂದ ಸತ್ತಾರ್‍ಮಿಯಾ ಭಿಕ್ಷುಮಿಯಾ, ಪ್ರವರ್ಗ ‘ಬಿ'ಗೆ ಮೀಸಲಾಗಿದ್ದ ಕ್ಷೇತ್ರದಿಂದ ಸಚಿನಕುಮಾರ ಸಿದ್ರಾಮಪ್ಪ ಶೆಟಕಾರ್, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರದಿಂದ ಪಾಂಡುರಂಗ ಗುಂಡಪ್ಪ ಬನಸೋಡೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಿಂದ ಪರಮೇಶ್ವರ ಜಗನ್ನಾಥ ಬಿರಾದಾರ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ದಿಲೀಪ್ ಶೇಷಪ್ಪ ಗೆಲುವಿನ ನಗೆ ಬೀರಿದ್ದಾರೆ.
ಪಿಕೆಪಿಎಸ್‍ನಲ್ಲಿ ಸತತ ಐದನೇ ಬಾರಿಗೆ ಪಾಟೀಲ ಬೆಂಬಲಿತ ಪೆನಾಲ್ ಪಾರುಪತ್ಯ ಮೆರೆದಿದೆ. ಜಯ ಗಳಿಸಿದ ಪೆನಾಲ್ ಅಭ್ಯರ್ಥಿಗಳು ದೀಪಕ್ ಪಾಟೀಲ ಅವರಿಗೆ ಸಿಹಿ ತಿನ್ನಿಸಿ, ಶಾಲು ಹೊದಿಸಿ ಸತ್ಕರಿಸಿದರು.
ನೂತನ ನಿರ್ದೇಶಕರು ಮತದಾರರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಬೇಕು. ರೈತರ ಹಿತ ರಕ್ಷಣೆಗೆ ಶ್ರಮಿಸಬೇಕು ಎಂದು ಪಾಟೀಲ ಸಲಹೆ ಮಾಡಿದರು.
ಮಹಾದೇವ ಸಾಗಾವೆ, ತಾನಾಜಿ ಮುಳೆ, ನಿರಂಜನ್ ಸ್ವಾಮಿ, ಸಾಯಿನಾಥ ಪಾಟೀಲ, ಸುಧಾಕರ ಜಾಧವ್, ಮಹಾದೇವ ಪಾಂಚಾಳ, ಹರಿಬಾ ಸಾಗಾವೆ, ಬಳಿರಾಮ ಮುಳೆ, ಕೇಶವ ಬಿರಾದಾರ ಇದ್ದರು.