ಜಿಲ್ಲೆ

ಬಗದಲ್‍ನಲ್ಲಿ ಕನಕದಾಸರ ಮೂರ್ತಿ ಅನಾವರಣ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದಲ್ಲಿ ಕನಕದಾಸರ ಮೂರ್ತಿ ಅನಾವರಣ ಹಾಗೂ ಕನಕದಾಸರ 537ನೇ ಜಯಂತ್ಯುತ್ಸವ ಮಂಗಳವಾರ ಸಡಗರ, ಸಂಭ್ರಮದಿಂದ ನಡೆಯಿತು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮೂರ್ತಿ ಅನಾವರಣ ಮಾಡಿದರು.

ನಾವು ಬುದ್ಧ, ಬಸವ, ಕನಕ, ಅಂಬೇಡ್ಕರ್, ವಾಲ್ಮೀಕಿ ಸೇರಿದಂತೆ ಮಹಾ ಪುರುಷರ ಮೂರ್ತಿಗಳ ಸ್ಥಾಪನೆಗಷ್ಟೇ ಸೀಮಿತವಾಗಬಾರದು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

78 ಹಳ್ಳಿಗಳ ಪಾಳೆಗಾರರಾಗಿದ್ದ ಭಕ್ತ ಕನಕದಾಸರಿಗೆ ಏಳು ರಂಜಣಗಿ ಚಿನ್ನ ಸಿಕ್ಕಿತ್ತು. ಆದರೆ, ಅವರು ಅದನ್ನು ಮನೆಗೆ ತೆಗೆದುಕೊಂಡು ಹೋಗದೆ, ರಾಜನಿಗೆ ಕೊಟ್ಟು, ಜನ ಕಲ್ಯಾಣಕ್ಕೆ ಬಳಸಲು ವಿನಂತಿಸಿದ್ದರು. ಮೊದಲು ತಿಮ್ಮಪ್ಪ ನಾಯಕ್ ಹೆಸರಿನಿಂದ ಪ್ರಸಿದ್ಧರಾಗಿದ್ದ ಅವರು, ಅಂದಿನಿಂದ ಕನಕ ಎಂಬ ಹೆಸರಿನಿಂದ ಗುರುತಿಸಲ್ಪಟ್ಟರು ಎಂದು ತಿಳಿಸಿದರು.

ಪರಿಶಿಷ್ಟ ಪಂಗಡ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹೇಳಿದರು.

ತ್ಯಾಗಿಗಳನ್ನು ಭೂಮಿ ತಾಯಿ ಹೊತ್ತು ಮೆರೆಸುತ್ತಾಳೆ. ಭೋಗಿಗಳು, ಸ್ವಾರ್ಥಿಗಳನ್ನು ಮಣ್ಣಲ್ಲಿ ಮಣ್ಣಾಗಿಸುತ್ತಾಳೆ ಎಂದು ದಿವ್ಯ ಸಾನಿಧ್ಯ ವಹಿಸಿದ್ದ ತಿಂಥಣಿ ಬ್ರಿಡ್ಜ್‍ನ ಕನಕ ಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ನುಡಿದರು.

ಬದುಕಿನಲ್ಲಿ ಆನಂದಕ್ಕಾಗಿ, ಮುಕ್ತಿಗಾಗಿ ಕಾಗಿನೆಲೆ ಆದಿಕೇಶವನ ಧ್ಯಾನ ಮಾಡಬೇಕು ಎಂದು ತಿಳಿಸಿದರು.

ಮುಖಂಡ ಎಂ.ಎಸ್. ಕಟಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ಪಂಡಿತರಾವ್ ಚಿದ್ರಿ, ಭಾರತಿಬಾಯಿ ಶೇರಿಕಾರ್, ಸಂಜೀವಕುಮಾರ ಅತಿವಾಳೆ, ಪೀರಪ್ಪ ಔರಾದೆ, ಬಸವರಾಜ ಮಾಳಗೆ, ಮಾಳಪ್ಪ ಅಡಸಾರೆ, ವಿಜಯಕುಮಾರ ಡುಮ್ಮೆ, ಸಂತೋಷ ಜೋಳದಾಪಕೆ, ತುಕಾರಾಮ ಚಿದ್ರಿ, ಗ್ರಾಮದ ಪ್ರಭುರಾವ್ ಕೊಳೆಕರ್, ಗುರುನಾಥ ರಾಜಗೀರಾ, ರಾಜಕುಮಾರ ಬಗದಲ್‍ಕರ್, ವೈಜಿನಾಥ ಮೇತ್ರೆ, ಜಗನ್ನಾಥ ಏಣಕೂರ, ಪ್ರಭುರಾವ್ ವಗ್ಗೆ, ಪಂಡಿತ ಮಲ್ಕಾನೋರ, ರಮೇಶ ಮಂಠಾಳ, ಸಂತೋಷ ಮೇತ್ರೆ, ದೇವೇಂದ್ರ ಮಂಠಾಳ, ಕಲ್ಲಪ್ಪ ಯರನಳ್ಳಿ, ರವಿ ಮಾಸ್ಟರ್ ಮತ್ತಿತರರು ಇದ್ದರು.

ಜಿಲ್ಲಾ ಕಾಳಿದಾಸ ಗೊಂಡ ಸಂಘದ ಅಧ್ಯಕ್ಷ ಸಂತೋಷ ವಗ್ಗೆ ಬಗದಲ್ ಸ್ವಾಗತಿಸಿದರು. ಶಿವರಾಜ ಕಟಗಿ ನಿರೂಪಿಸಿದರು. ಧನರಾಜ ಕಟಗಿ ವಂದಿಸಿದರು.