ಜಿಲ್ಲೆ

ಕೆವಿಕೆಯಲ್ಲಿ ದಂತ ತಪಾಸಣೆ ಶಿಬಿರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರೈತ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ಎಸ್. ಬಿ. ಪಾಟೀಲ ದಂತ ಆಸ್ಪತ್ರೆ ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ವತಿಯಿಂದ ತಾಲ್ಲೂಕಿನ ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಂತ ತಪಾಸಣೆ ಶಿಬಿರ ನಡೆಯಿತು.

ರೈತರು, ಕೇಂದ್ರದ ಸಿಬ್ಬಂದಿ, ಕೃಷಿ ಡಿಪೆÇ್ಲಮಾ ವಿದ್ಯಾರ್ಥಿಗಳು ಸೇರಿದಂತೆ ನೂರು ಜನರ ದಂತ ತಪಾಸಣೆ ಮಾಡಲಾಯಿತು.

ಅವಶ್ಯಕತೆ ಇರುವವರಿಗೆ ಹೆಚ್ಚಿನ ಚಿಕಿತ್ಸೆಗೆ ಸಲಹೆ ನೀಡಲಾಯಿತು.

ದಂತ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಶಿವಕುಮಾರ ಪಾಖಾಲ್ ಹೇಳಿದರು.

ಕ್ಲಬ್ ಕಾರ್ಯದರ್ಶಿ ಪ್ರಭು ತಟ್ಟಪಟಿ, ಡಾ. ಸಿದ್ದನಗೌಡ, ಡಾ. ಕಪಿಲ್ ಪಾಟೀಲ, ಎಸ್ ಬಿ ಪಾಟೀಲ ದಂತ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಇದ್ದರು.